‘ಶತಮಾನದ ಕವಿ ಯೇಟ್ಸ್’ ಇಂಗ್ಲಿಷ್ ನಾಟಕಕಾರ, ಕವಿ, ಲೇಖಕ ಯೇಟ್ಸ್ ಬದುಕು ಬರಹದ ಕುರಿತು ಲೇಖಕ ಯು. ಆರ್. ಅನಂತಮೂರ್ತಿ ಅವರು ಬರೆದ ಕೃತಿ ಇದು.
ನುಡಿವ ಬೆರಗು, ಶತಮಾನದ ಕವಿ ಯೇಟ್ಸ್, ಕವಿ ಕಾವ್ಯ ಪರಿಚಯ ಆನಂತರ ಯೇಟ್ಸ್ ಪದ್ಯಗಳಾದ ಆದಮ್ಮಿನ ಶಾಪ, ಓ ಬಹುಕಾಲ ಪ್ರೀತಿಸಬೇಡ, ಈಸ್ಟರ್ 1916, ಕೂಲ್ ನಲ್ಲಿ ಕಾಡುಹಂಸಗಳು, ಮಗಳಿಗಾಗಿ ಪ್ರಾರ್ಥನೆ, ಲೀಡಾ ಮತ್ತು ಹಂಸರೂಪಿಯಾಗಿ ಬಂದ ಸ್ಯೂಸ್, ಬೈಜಾಂಟಿಯಂಗೆ ಯಾನ, ಜೀವಾತ್ಮ ಸಂವಾದ, ದೀರ್ಘ ಮೌನದ ಬಳಿಕ ಸಂವಾದ, ಆಯ್ಕೆ, ಮರುಳಿ ಜೇನ್ ಪಾದ್ರಿಗೆ, ವೃದ್ಧಾಪ್ಯಕ್ಕೊಂದು ಪ್ರಾರ್ಥನೆ, ಮಾನವ ಜೀವದ ನಾಲ್ಕು ಹಂತಗಳು, ಮತ್ತೀನ್ನೇನು, ಜಯ ಜಯ ಹೇ ಕ್ರಾಂತಿಗೆ, ರಾಜಕೀಯ ಮತ್ತು ಪರಮ ಧೂರ್ತ ಹುಂಬ ಮುದುಕ ಪದ್ಯಗಳಿವೆ.
.ಆನಂತರದಲ್ಲಿ ಟಿಪ್ಪಣಿಗಳು, ಯೇಟ್ಸ್ ಕಾವ್ಯಕ್ಕೊಂದು ಪ್ರವೇಶ ಮತ್ತು ಯೇಟ್ಸ್ ನ ಕಾವ್ಯ ಮತ್ತು ರಾಜಕೀಯ ಎಂಬ ವಿಶ್ಲೇಷಣೆಗಳಿವೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE