ಶಾರದಮಣಿದೇವಿ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ಎಚ್.ಎಸ್. ಪಾರ್ವತಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಓದು ಬರಹ ಏನೂ ಇಲ್ಲದಿದ್ದರೂ ಸಾವಿರಾರು ಮಂದಿಗೆ ’ಮಹಾಮಾತೆ’ ಯಾದ ಮಹಿಮಾವಂತೆ; ಸರಳ, ಶುಭ್ರ ಜೀವನದಿಂದ ಅನೇಕರಿಗೆ ಮಾರ್ಗದರ್ಶನ ಮಾಡಿದ ಆದರ್ಶ ಸ್ತ್ರೀ; ಶ್ರೀ ರಾಮಕೃಷ್ಣ ಪರಮಹಂಸರಂತಹ ಮಹಾತ್ಮರಿಗೆ ಸಾಟಿಯಾದ ಸಾಧ್ವೀ ಪತ್ನಿ ಎಂದು ಶಾರದಮಣಿ ದೇವಿ ಅವರ ಕುರಿತು ಈ ಕೃತಿಯಲ್ಲಿ ಶಾರದಮಣಿ ದೇವಿ ಅವರ ಕುರಿತು ಇಲ್ಲಿ ವಿವರಿಸಲಾಗಿದೆ. ಶಾರದಮಣಿ ದೇವಿ ಅವರ ಬಾಲ್ಯ ಜೀವನ, ಸರಳತೆ, ಜೀವನದ ತಿರುವುಗಳು, ರಾಮಕೃಷ್ಣ ಪರಮಹಂಸ ಜೊತೆಗಿನ ಕ್ಷಣಗಳನ್ನು ಲೇಖಕಿ ಇಲ್ಲಿ ಸರಳ ಕನ್ನಡ ಭಾಷೆಯಲ್ಲಿ ಚಿತ್ರಿಸಿದ್ದಾರೆ.
ಹಿರಿಯ ಸಾಹಿತಿ ಪಾರ್ವತಿ ಎಚ್.ಎಸ್ ಅವರು ವೃತ್ತಿಯಲ್ಲಿ ಆಕಾಶವಾಣಿ ಕಾರ್ಯಕ್ರಮ ಸಂಯೋಜಕಿಯಾಗಿ ಸೇವೆ ಸಲ್ಲಿಸಿದ್ದರು. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಅವರು ನೇಸರ-ನೆರಳು, ಮಡಿಲು, ಯುಗಪುರುಷ ಮುಂತಾದ ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಇವರಿಗೆ ಅನುಪಮಾ ಪ್ರಶಸ್ತಿ, ಸೌಹ ಸಮಾನ ಲಿಪಿಪ್ರಾಜ್ಞೆ ಪ್ರಶಸ್ತಿ, ಕೆ.ಎಸ್.ಭಾರತಿ ರಾಜಾರಾಮ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದುಬಂದಿವೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಕಲೆಗೆ ಜಾತಿಯ ಹಂಗಿಲ್ಲ, ಇದು ಬರಿ ಬೆಳಗಲ್ಲ, ಹೆಣ್ಣು ಹೃದಯ, ಬದಲಾದ ಪ್ರತಿಬಿಂಬ, ಸ್ವರ ಅಪಸ್ವರ, ಒಂಟಿ ಮೋಡ, ನೆನಪು ...
READ MORE