ಹಿರಿಯ ಸಾಹಿತಿ ಪಾರ್ವತಿ ಎಚ್.ಎಸ್ ಅವರು ವೃತ್ತಿಯಲ್ಲಿ ಆಕಾಶವಾಣಿ ಕಾರ್ಯಕ್ರಮ ಸಂಯೋಜಕಿಯಾಗಿ ಸೇವೆ ಸಲ್ಲಿಸಿದ್ದರು. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಅವರು ನೇಸರ-ನೆರಳು, ಮಡಿಲು, ಯುಗಪುರುಷ ಮುಂತಾದ ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
ಇವರಿಗೆ ಅನುಪಮಾ ಪ್ರಶಸ್ತಿ, ಸೌಹ ಸಮಾನ ಲಿಪಿಪ್ರಾಜ್ಞೆ ಪ್ರಶಸ್ತಿ, ಕೆ.ಎಸ್.ಭಾರತಿ ರಾಜಾರಾಮ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದುಬಂದಿವೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಕಲೆಗೆ ಜಾತಿಯ ಹಂಗಿಲ್ಲ, ಇದು ಬರಿ ಬೆಳಗಲ್ಲ, ಹೆಣ್ಣು ಹೃದಯ, ಬದಲಾದ ಪ್ರತಿಬಿಂಬ, ಸ್ವರ ಅಪಸ್ವರ, ಒಂಟಿ ಮೋಡ, ನೆನಪು ಸಾಯಲಿಲ್ಲ, ಸುಳಿ, ಪರಾಜಯ, ದುರ್ಗೇಶ ನಂದಿನಿ, ತ್ಯಾಗಪತ್ರ ಮತ್ತು ಉದಯದೆಡೆಗೆ, ಬಿಳಿರಕ್ತ, ಮುಚ್ಚಿದ ಬಾಗಿಲು, ಮಾಸಿದ ಸೆರಗು, ದರ್ಬಾರಿ ರಾಗ, ಪಂಜಾಬಿ ಲೋಕ ಕಥೆಗಳು, ಬಂಟೀ, ರಣಹದ್ದುಗಳು ಇತ್ಯಾದಿ.
ಕನ್ನಡದ ಸಣ್ಣ ಕಥೆಗಳನ್ನು ಬಾನುಲಿ ರೂಪಕವಾಗಿಸಿ ಪ್ರಸಾರ ಮಾಡಿದ್ದಾರೆ. ಹಲವಾರು ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿರುವ ಇವರು ಘಟಶ್ರಾದ್ಧ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.