ಒಟ್ಟು 26 ಅಧ್ಯಾಯಗಳಿವೆ. ಎಲ್ಲ ಅಧ್ಯಾಯಗಳು ಯಾವುದೇ ಶ್ರಮವಿಲ್ಲದೆ ಓದಿಸಿಕೊಂಡು ಹೋಗುತ್ತದೆ. ವಿಷಯವನ್ನು ಮನಮುಟ್ಟುವ ಹಾಗೆ ವರ್ಣಿಸುವ ಕಲೆಯು ಸತೀಶ್ ಅವರಿಗೆ ಒಗ್ಗಿದೆ. ಹಾಗಾಗಿ ಇಡೀ ಪುಸ್ತಕವು ಒಂದೇ ಗುಕ್ಕಿಗೆ ಓದಿ ಮುಗಿಸಬಹುದು. ಈ ಪುಸ್ತಕದ ಕೊನೆಯ ಅಧ್ಯಾಯ ಹಾಗೂ ಬೆನ್ನುಡಿಗಳು ಮಾತ್ರ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಶಂಕರ್ ನಾಗ್ ಮೂಲತಃ ರಂಗಭೂಮಿಯ ನಟ. ಸಂಕೇತ್ ತಂಡವನ್ನು ಕಟ್ಟಿಕೊಂಡು ಯಶಸ್ವೀ ನಾಟಕಗಳನ್ನು ಪ್ರಯೋಗಿಸಿದರು. ಚಿತ್ರನಟರಾಗಿ 96 ಚಿತ್ರಗಳಲ್ಲಿ ನಟಿಸಿದರು. ಮಿಂಚಿನ ಓಟ, ಒಂದು ಮುತ್ತಿನ ಕಥೆ, ಆಕ್ಸಿಡೆಂಟ್, ನೋಡಿ ಸಾಮಿ ನಾವಿರೋದೇ ಹೀಗೆ ಇತ್ಯಾದಿ ಚಿತ್ರಗಳನ್ನು ನಿರ್ದೇಶಿಸಿದರು. ಟೆಲಿವಿಷನ್ ಸೀರಿಯಲ್ಲಿ ಮಾಲ್ಗುಡಿ ಡೇಸ್ ಮೂಲಕ ರಾಷ್ಟ್ರೀಯ-ಅಂತಾರಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದರು. ವಾಸ್ತವದಲ್ಲಿ ಕನ್ನಡಿಗರಿಗೆ ದೊಡ್ಡ ದೊಡ್ಡ ಬಣ್ಣ ಬಣ್ಣದ ಕನಸುಗಳನ್ನು ತೋರಿಸಿದವರೇ ಶಂಕರ್ ನಾಗ್!ಅಂತಹ ಶಂಕರ್ ನಾಗ್ ಅವರಿಗೆ ಕನ್ನಡ ಚಿತ್ರರಂಗ ಏನು ಮಾಡಿದೆ? ಕರ್ನಾಟಕ ಸರ್ಕಾರವು ಏನು ಮಾಡಿದೆ? ಅವರ ಹೆಸರಿನಲ್ಲಿ ಪ್ರಶಸ್ತಿ, ಪುತ್ಥಳಿ, ಸ್ಟುಡಿಯೊ ಯಾವುದನ್ನೂ ನಿರ್ಮಿಸಲಿಲ್ಲ. ಒಂದು ರಸ್ತೆಗೆ, ಒಂದು ಬಡಾವಣೆಗೆ ಅವರ ಹೆಸರನ್ನು ಇಡಲಿಲ್ಲ. ಶಂಕರ್ ನಾಗ್ ಅವರ ಹೆಸರನ್ನು ಸದಾ ಕಾಲ ಹಸಿರಾಗಿಟ್ಟವರು ಅವರ ಅಭಿಮಾನಿಗಳು. ಮುಖ್ಯವಾಗಿ ಆಟೋರಿಕ್ಷಾ ಡ್ರೈವರುಗಳು. ಇಂದಿಗೂ ಶಂಕರ್ ನಾಗ್ ಅವರ ಹುಟ್ಟಿದ ಹಬ್ಬವನ್ನು ರಕ್ತದಾನದ ಮೂಲಕ ಆಚರಿಸುತ್ತಿರುವ ಅವರ ಅಭಿಮಾನಿಗಳಿಗಾಗಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.
ಸತೀಶ ಬಳೆಗಾರ ಇವರು ಕುಂದಾಪುರ ತಾಲೂಕಿನ ಸಿದ್ದಾಪುರದವರು. ವೃತ್ತಿಯಲ್ಲಿ ವ್ಯಾಪಾರಿ. ಪ್ರವೃತ್ತಿಯಲ್ಲಿ ಲೇಖಕ. ಶಂಕರ್ ನಾಗ್ ದಿ ಲೆಜೆಂಡ್ ಸೇರಿದಂತೆ ಇದುವರೆಗೆ ಹತ್ತು ಕೃತಿಗಳನ್ನು ರಚಿಸಿರುತ್ತಾರೆ. 'ಧೈರ್ಯ ಅಂದರೆ ಏನು' ಇದು ಇವರ ಮೊದಲ ಕೃತಿ. ಈ ಕೃತಿ 2008 ರಲ್ಲಿ ಬಿಡುಗಡೆಗೊಂಡಿತ್ತು. ಗೆಲುವಿಗಾಗಿ ಧ್ಯಾನ, ಚಾಣಕ್ಯ, ನರೇಂದ್ರ ಮೋದಿ, ಫರ್ಸ್ಟ್ ಪೆಗ್ ಇವರು ಬರೆದಿರುವ ಪ್ರಮುಖ ಕೃತಿಗಳು. ಇದರಲ್ಲಿ ಚಾಣಕ್ಯ ಪುಸ್ತಕ ಮೂರು ಬಾರಿ ಮರು ಮುದ್ರಣಗೊಂಡಿದೆ. ಉದಯವಾಣಿ, ಹೊಸ ದಿಗಂತ, ತರಂಗ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನ, ಕಥೆಗಳು ಪ್ರಕಟವಾಗಿವೆ. ಕೃತಿಗಳು: ಶಂಕರ್ ನಾಗ್ ...
READ MORE