ಲೇಖಕ ಶ್ರೀಧರ ಹೆಗಡೆ ಭದ್ರನ್ ಅವರ ಕೃತಿ-ಸ.ಸ.ಮಾಳವಾಡ. ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಾಗುವ ಮುನ್ನ ಪ್ರತಿಷ್ಠಿತ ಶಿಕ್ಷಣ ಕೇಂದ್ರವಾಗಿದ್ದ ಕರ್ನಾಟಕ ಕಲಾ ಕಾಲೇಜಿನ ಮೊದಲ ಪ್ರಾಂಶುಪಾಲರಾಗಿದ್ದ ಪ್ರೊ. ಸ.ಸ. ಮಾಳವಾಡ ಅವರ ಬದುಕು-ಸಾಹಿತ್ಯ ಸಾಧನೆ-ಆಡಳಿತ ವೈಖರಿ ಕುರಿತು ಬರೆದ ಕೃತಿ ಇದು.
ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಡಿ.ಎಂ. ಹಿರೇಮಠ ಅವರು “ಸ.ಸ. ಮಾಳವಾಡ ಅವರು ಸಾಹಿತ್ಯ, ಆಧ್ಯಾತ್ಮ, ಆಡಳಿತ ಹೀಗೆ ಮೂರು ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದವರು ಸ.ಸ.ಮಾಳವಾಡ ಅವರನ್ನು ಕನ್ನಡ ಸಾಹಿತ್ಯಾಸಕ್ತರಿಗೆ ಪರಿಚಯಿಸುವ ಮಹತ್ಕಾರ್ಯವನ್ನು ಅತ್ಯಂತ ಉತ್ಸಾಹದಿಂದ ಮಾಡಿಕೊಟ್ಟಿದ್ದಾರೆ ಎಂದು ಶ್ಳಾಘಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...
READ MORE