About the Author

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್‌ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ.

ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಜಾನಪದ, ಭಾಷಾ ವಿಜ್ಞಾನ, ಭಾಷಾಂತರ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ-ನಿರ್ವಹಣೆಗಳಲ್ಲಿ ಪರಿಣತಿ.

ಪ್ರಕಟಿತ ಕೃತಿಗಳು : ಕಾವ್ಯದರ್ಶನ (2005), ಲಿಖಿತ ಅಲಿಖಿತ (2006), ಆಧುನಿಕ ಕನ್ನಡ ಮಹಾಕಾವ್ಯಗಳು (2007, 2008), ವಿಸ್ತರಣೆ (2009), ಅವಿರತ (2011), ಸಾರೂಪ್ಯ (2011), ಶತಮಾನ ಕಂಡ ಸಾಹಿತಿ ಸ.ಸ.ಮಾಳವಾಡ (2012), ಅನುಕ್ರಮ (2014) ಕಿರುವೆರಳ ಸಟೆ (2017), ಸಾಹಿತ್ಯ ಚಳುವಳಿಗಳು (2018) ಇತ್ಯಾದಿ. ಸಂಪಾದನೆ- ಜಿನದೃಷಿ (2004), ಜಿನತಿಲಕ (2005), ಸಾಹಿತ್ಯಕ ವಾದಗಳು-ಚಳುವಳಿಗಳು (2006), ಜಿನವಾಣಿ (2007), ಮನೋಹರ ಗ್ರಂಥಮಾಲೆ (2008), ಮಂಚಿನಬಳ್ಳಿ ಗ್ರಂಥಮಾಲೆ (೨೦೦೮), ಜೀವನ ಶಿಕ್ಷಣ (೨೦೦೮), ವೀರೇಂದ್ರ ಹೆಗ್ಗಡೆ ಅರುವತ್ತರ ಸಂಭ್ರಮ (೨೦೦೯), ಸಂಪತ್ತಿನೊಳಗೊಬ್ಬ ಸಂತ (೨೦೧೪) ಇತ್ಯಾದಿ.

ದ. ರಾ. ಬೇಂದ್ರೆ ಪುಸ್ತಕ ಬಹುಮಾನ 2010, ಸಿದ್ದವನಹಳ್ಳಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ 2015 ಸೇರಿದಂತೆ ಹಲವು ಗೌರವ, ಪುರಸ್ಕಾರಗಳು ಸಂದಿವೆ.

ಶ್ರೀಧರ ಹೆಗಡೆ ಭದ್ರನ್‍

(01 Nov 1977)