ಕನ್ನಡ ನವೋದಯ ಯಜ್ಞದ ಅಧ್ವರ್ಯುಗಳಲ್ಲಿ ಟಿ.ಎಸ್. ವೆಂಕಣ್ಣಯ್ಯನವರು ಒಬ್ಬರು. ಒಂದರ್ಥದಲ್ಲಿ ಅಗ್ರಮಾನ್ಯರು. ಅವರು ಮೂಲತಃ ಅಧ್ಯಾತ್ಮಿಕ ಚೇತನವಾಗಿದ್ದು, ಆ ನವೋದಯದ ಬೆಳಗಿಗೆ ಅಧ್ಯಾತ್ಮದ ಸ್ವರ್ಗೀಯ ಕಾಂತಿಯನ್ನು ಮೇಳೈವಿಸಿದರೆಂದರೆ ತಪ್ಪಾಗುವುದಿಲ್ಲ. ಅವರ ಬದುಕು ಬರೆಹಗಳ ಕುರಿತು ಬೆಳಕು ಚೆಲ್ಲುವ ಕೃತಿ ‘ಪ್ರಾಧ್ಯಾಪಕ ವೆಂಕಣ್ಣಯ್ಯ’.
ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ ...
READ MORE