ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ.
ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ , (ಕಾದಂಬರಿ), ಕಥಾವಲ್ಲರಿ, ಮಹಾವೀರ, ಶಿವಶರಣ ಕಥಾರತ್ನ ಕೋಶ, ಮೂರು ತಲೆಮಾರು, ತಪಸ್ವಿಜಿ ಮಹಾರಾಜ್, ಪಂಪ,ಮುದ್ದಣ ,ರತ್ನಾಕರ ವರ್ಣಿ ಕುರಿತ ಸಾಹಿತ್ಯ ಗ್ರಂಥಗಳು. ಇತ್ಯಾದಿ ಒಟ್ಟು 7೦ ಕೃತಿಗಳು ಪ್ರಕಟವಾಗಿವೆ.
ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಸಂದಿದೆ. ಸ್ವಸ್ತಿ. (ತ ವೆಂ ಸ್ಮಾರಕ ಗ್ರಂಥಮಾಲೆ).ಅಭಿನಂದನೆ ಗ್ರಂಥ ಪ್ರಕಟಿಸಿದೆ. 21-08-1998 ರಂದು ನಿಧನರಾದರು.