ನೀರ ಮೇಲಣ ಹೆಜ್ಜೆ

Author : ಬಸವರಾಜ ಕಲ್ಗುಡಿ

Pages 576

₹ 600.00




Year of Publication: 2022
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ ನೂರಡಿ ರಸ್ತೆ, ರಾಜೇಂದ್ರನಗರ 577201
Phone: 9449886390

Synopsys

ನೀರ ಮೇಲಣ ಹೆಜ್ಜೆ ಎನ್ನುವ ಶೀರ್ಷಿಕೆಯ ಈ ಕೃತಿಯು ಬಿದರಹಳ್ಳಿಯವರ ವ್ಯಕ್ತಿತ್ವ ಹಾಗೂ ಸೃಜನಶೀಲತೆಯ ಆಯಾಮಗಳನ್ನು ಹಿಡಿದಿರುವ ಕೃತಿಯಾಗಿದೆ.ಆದ್ದರಿಂದಲೇ ಈ ಕೃತಿ ಬೌದ್ಧಿಕ ಅಹಂನಿಂದ ಬೀಗದೆ, ಬೌದ್ಧಿಕತೆ ಮತ್ತು ಭಾವ ಶುದ್ಧಿಯ ಮಿಶ್ರಣದ ಮೊತ್ತವಾಗಿದೆ. ಈ ಕೃತಿಯಲ್ಲಿ ಬರೆದಿರುವ ನರಸಿಂಹಮೂರ್ತಿಯವರ ಗೆಳೆಯ ಮತ್ತು ಶಿಷ್ಯರ ಬರವಣಿಗೆಗಳಲ್ಲಿ ನರಸಿಂಹಮೂರ್ತಿಯವರ ಮನೆಯನ್ನು ಕುರಿತು ಪ್ರಸ್ತಾಪಿಸುವುದು ಕಾಣುತ್ತದೆ. ಬಿದರಹಳ್ಳಿಯವರ ಮನೆ ಒಂದು ರೂಪಕವಾಗಿದೆ. ಅಲ್ಲಿಯ ಕುಟುಂಬದವರ ಪ್ರೀತಿ-ವಿಶ್ವಾಸ, ಉಪಚಾರ, ಜೊತೆಗೆ ಸಾಹಿತ್ಯದ ಚರ್ಚೆ ಇವುಗಳು ನರಸಿಂಹಮೂರ್ತಿಯವರ ವ್ಯಕ್ತಿತ್ವವನ್ನು ರೂಪಕದಂತೆ ಮಂಡಿಸಿವೆ. ಈ ಕೃತಿಯ ಲೇಖನಗಳನ್ನು ಹೊಂದಿಸಲು ಚನ್ನೇಶ ಅವರು ಶ್ರಮ ಪಟ್ಟಿದ್ದಾರೆ. ಅವುಗಳನ್ನು ಜೋಡಿಸಿ, ವಿಭಾಗಿಸಿ ಅವುಗಳಿಗೆ ಒಂದು ತಾತ್ವಿಕವಾದ ಆಯಾಮವನ್ನು ತರುವಲ್ಲಿ ಲೇಖಕರಾದ ಡಾ. ಚನ್ನೇಶ್ ಹೊನ್ನಾಳಿಯವರು ಶ್ರಮಿಸಿದ್ದಾರೆ. ಈ ಶ್ರಮ ದಿಂದಾಗಿಯೇ ಕಿರಿದಾದರೂ ಪ್ರೀತಿಯನ್ನು ಹೊರ ಸೂಸುವ 'ನೀರ ಮೇಲಣ ಹೆಜ್ಜೆ' ನಿಮ್ಮ ಮುಂದೆ ಇದೆ. ಶೀರ್ಷಿಕೆಯು ಒಂದು ರೂಪಕ. ನೀರ ಮೇಲಿನ ಹೆಜ್ಜೆಯನ್ನು ಗುರುತಿಸಲಾಗದು. ಆದರೆ ಹಾಗೆ ಇಟ್ಟ ಹೆಜ್ಜೆಯನ್ನು ಇಟ್ಟವರು ಬಲ್ಲರು. ಅನುಭವಿಸಿದವರು. ಬಲ್ಲರು. ಬಿದರಹಳ್ಳಿ ನರಸಿಂಹಮೂರ್ತಿಯವರ ವ್ಯಕ್ತಿತ್ವದಲ್ಲಿರುವ ಪ್ರೀತಿಯೂ ಹಾಗೆಯೇ ಅದರ ಫಲವೇ ಈ ಕೃತಿ ನೀರ ಮೇಲಣ ಹೆಜ್ಜೆ.

About the Author

ಬಸವರಾಜ ಕಲ್ಗುಡಿ

1956ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಬಸವರಾಜ ಕಲ್ಗುಡಿ ಅವರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವು ಬೆಂಗಳೂರಿನಲ್ಲಿ ನಡೆಸಿದರು.  ಎಂ.ಎ. (1975) ಪದವೀಧರರು. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು' ಸಂಶೋಧನಾ ಪ್ರಬಂಧಕ್ಕೆ (1983) ಪಿಎಚ್.ಡಿ. ಪದವಿ. ಕರ್ನಾಟಕದಲ್ಲಿಯ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆ `ಮಹಾಸತಿ ಆಚರಣೆ'. ಅವರ ಅಧ್ಯಯನ ಶಾಸನವನ್ನು ಕುರಿತಾಗಿದ್ದರೂ, ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿದ್ದಾರೆ. ಸಂಸ್ಕೃತಿ ಕುರಿತಂತೆ ವ್ಯಾಖ್ಯಾನಿಸುವಲ್ಲಿ ಕಲ್ಗುಡಿಯವರು ಸಂಸ್ಕೃತಿಯಲ್ಲಿಯ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುತ್ತಾರೆ. ಕಲ್ಗುಡಿಯವರು ವಚನ ಸಾಹಿತ್ಯ ಕುರಿತ ಸಂಶೋಧನಾತ್ಮಕ ಅಧ್ಯಯನದಲ್ಲಿ ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿದೆ. ಅವರು ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು, ...

READ MORE

Related Books