ಹಿರಿಯ ಸಾಹಿತಿ, ವಿದ್ವಾಂಸ ಟಿ.ಎಸ್. ವೆಂಕಣ್ಣಯ್ಯ ಅವರು ಬದುಕು-ಬರೆಹ-ಸಾಧನೆ -ನಂಬಿಕೆ ಕುರಿತು ಅವರ ಸಹೋದರ ತ.ಸು. ಶಾಮರಾಯರು ಬರೆದ ಜೀವನ ಚರಿತ್ರೆಯೇ ಈ ಕೃತಿ-ಮೂರು ತಲೆಮಾರು.’ ಕನ್ನಡ ನವೋದಯ ಸಾಹಿತ್ಯದಲ್ಲಿ ಟಿ.ಎಸ್. ವೆಂಕಣ್ಣಯ್ಯ ಅವರ ಹೆಸರು ಶಾಶ್ವತ. ರಾಷ್ಟ್ರಕವಿ ಕುವೆಂಪು ಅವರ ಗುರುಗಳು. ಟಿ.ಎಸ್. ವೆಂಕಣ್ಣಯ್ಯ ಹಾಗೂ ಅವರ ಎರಡು ತಲೆಮಾರಿನ ವಿವರಗಳು ಇರುವುದರಿಂದ ಕೃತಿಗೆ ”ಮೂರು ತಲೆಮಾರು’ ಎಂಬ ಶೀರ್ಷೀಕೆ ನೀಡಲಾಗಿದೆ. ವೆಂಕಣ್ಣಯ್ಯ ಅವರ ಅಲೌಕಿಕ ವಿಚಾರಗಳು, ಅಚಲವಾದ ದೈವಶ್ರದ್ಧೆ, ನಿಲುವುಗಳು, ಲೋಕಾನುಭವಗಳು ಎಲ್ಲವನ್ನೂ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಈ ಮೂರು ತಲೆಮಾರುಗಳ ಬದುಕಿನ ನಿರೂಪಣೆಯನ್ನು ಲೇಖಕರು ’ಕಂಡಿದ್ದು, ಕೇಳಿದ್ದು, ಅನುಭವಿಸಿದುದು’ ಎಂದು ಮೂರು ಭಾಗಗಳಾಗಿ ಮಾಡಿ, ಕೃತಿಯನ್ನು ಅಧ್ಯಯನಯೋಗ್ಯವಾಗಿಸಿದ್ದಾರೆ.
ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 1987