ಮಹಾತ್ಮ ಗಾಂಧಿ

Author : ರಾಮಚಂದ್ರ ಹಬ್ಬು

Pages 592

₹ 600.00




Year of Publication: 2021
Published by: ಗೀತಾಂಜಲಿ ಪಬ್ಲಿಕೇಷನ್ಸ್‌
Address: ನಂ. 60, 2ನೇ ʻಡಿʼ ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್‌, ನಾಗರಬಾವಿ, ಬೆಂಗಳೂರು- 560 072
Phone: 9740066842

Synopsys

ಲೇಖಕ ರಾಮಚಂದ್ರ ಹಬ್ಬು ಅವರು ಅನುವಾದಿಸಿದ ಜೀವನಚರಿತೆ ಕೃತಿ ʻಮಹಾತ್ಮ ಗಾಂಧಿʼ. ಮೂಲ ಕೃತಿ ʻಮಹಾತ್ಮ ಗಾಂಧಿ: ಎ ಬಯಾಗ್ರಫಿʼ ಗ್ರಂಥವನ್ನು ಲೇಖಕ, ವಿದ್ವಾಂಸ ಹಾಗೂ ಗಾಂಧಿವಾದಿ ಬಿ.ಆರ್.‌ ನಂದಾ ಅವರು 1958ರಲ್ಲಿ ರಚಿಸಿದ್ದರು. ಅವರು ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಹತ್ತಿರದಿಂದ ಅರಿತು, ಅರಗಿಸಿಕೊಂಡು ಅವರ ಜೀವನ ಗಾಥೆಯ ಕುರಿತು ಇಲ್ಲಿ ಹೇಳಿದ್ದಾರೆ. ಪುಸ್ತಕದ ಮುನ್ನುಡಿಯಲ್ಲಿ ಅರುಣ ಕುಮಾರ ಹಬ್ಬು ಅವರು, “ಮಹಾತ್ಮ ಗಾಂಧಿಯವರ ಕುರಿತು ಇಂದು ಅದೆಷ್ಟೋ ಸಾಹಿತ್ಯ ಕೃತಿಗಳು ಪ್ರಕಟವಾಗಿವೆ. ಜಗತ್ತಿನಾದ್ಯಂತ ಅವರ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಅವರ ಪ್ರತಿಮೆಗಳ ಸ್ಥಾಪನೆಯಾಗಿವೆ. ಇಷ್ಟೊಂದು ವಿಶ್ವವ್ಯಾಪಿ ಜನಮನ್ನಣೆ ಗಳಿಸಿದ ವ್ಯಕ್ತಿ ಯಾರಾದರೂ ಇದ್ದರೆ ಮಹಾತ್ಮ ಗಾಂಧೀಜಿ ಮಾತ್ರವಲ್ಲದೇ ಬೇರಾರೂ ಇಲ್ಲ. ಮಹಾತ್ಮ ಗಾಂಧೀಜಿಯವರ ಜೀವನ ಸಾಧನೆಗಳನ್ನು ಅನೇಕರು ಬರೆದಿದ್ದಾರೆ. ಸ್ವತಃ ಗಾಂಧೀಜಿಯವರು ಬರೆದ ಲೇಖನಗಳು, ಕೃತಿಗಳ ಪುಟದ ಸಂಖ್ಯೆಯೇ ಐವತ್ತುಸಾವಿರ ಪುಟಗಳನ್ನು ಮೀರುತ್ತದೆ. ಇಷ್ಟೊಂದು ಅಗಾಧ ಜ್ಞಾನ ಭಂಡಾರವನ್ನು ಹೊಂದಿ ಬರೆದ ಮಹಾತ್ಮರ ಜೀವನ ಚರಿತ್ರೆಯ ದಾಖಲೆ ಒಂದು ಸಾಹಸವೇ ಸೈ. ಅದನ್ನು ನಂದಾ ಅವರು ಸಮರ್ಥವಾಗಿ ಸಾಧಿಸಿದ್ದರಿಂದಲೇ ಈ ಕೃತಿ ಎತ್ತರದಲ್ಲಿ ನಿಲ್ಲುತ್ತದೆ. ಅಲ್ಲದೇ ಮಹಾತ್ಮ ಗಾಂಧೀಜಿಯವರಿಗೆ ಅರ್ಹ ಗೌರವ ಸಲ್ಲಿಸಿದಂತಾಗುತ್ತದೆ” ಎಂದು ಹೇಳಿದ್ದಾರೆ.

About the Author

ರಾಮಚಂದ್ರ ಹಬ್ಬು

ರಾಮಚಂದ್ರ ಹಬ್ಬು ಅವರು ಮೂಲತಃ ಕಾರವಾರದವರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಇವರು, 30 ವರ್ಷಗಳ ಕಾಲ ದಿವಾಕರ್ ವಾಣಿಜ್ಯ‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಬಳಿಕ ಅಲ್ಲಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತಿಯನ್ನು ಹೊಂದಿದ್ದಾರೆ.  ʻದಿ ಹಿಂದೂʼ ಪತ್ರಿಕೆಗೆ ಉತ್ತರ ಕನ್ನಡ ಜಿಲ್ಲೆಯ ಸುದ್ದಿ ವಿತರಕರಾಗಿ ಸುಮಾರು 20 ವರ್ಷ ಕೆಲಸ ಮಾಡಿದ್ದಾರೆ. ಬರವಣಿಗೆ ಇವರ ಆಸಕ್ತಿದಾಯಕ ವಿಷಯವಾಗಿದ್ದು, ಬುದ್ದನ ಬೋಧನೆಗಳ ಕುರಿತ ಒಂದು ಪುಸ್ತಕವನ್ನು ಬೆಂಗಳೂರಿನ ʻಮಹಾಬೋಧಿ ಸೊಸೈಟಿʼಗೋಸ್ಕರ ಅನುವಾದ ಮಾಡಿದ್ದಾರೆ. ಹಾಗೆಯೇ ʻಮಹಾತ್ಮ ಗಾಂಧಿ ಜೀವನ ಚರಿತ್ರೆʼ ಪುಸ್ತಕವನ್ನು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸ್ತುತ,‌ ರಾಮಚಂದ್ರ ಅವರು, ದಿವಾಕರ್ ...

READ MORE

Related Books