About the Author

ರಾಮಚಂದ್ರ ಹಬ್ಬು ಅವರು ಮೂಲತಃ ಕಾರವಾರದವರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಇವರು, 30 ವರ್ಷಗಳ ಕಾಲ ದಿವಾಕರ್ ವಾಣಿಜ್ಯ‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಬಳಿಕ ಅಲ್ಲಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತಿಯನ್ನು ಹೊಂದಿದ್ದಾರೆ.  ʻದಿ ಹಿಂದೂʼ ಪತ್ರಿಕೆಗೆ ಉತ್ತರ ಕನ್ನಡ ಜಿಲ್ಲೆಯ ಸುದ್ದಿ ವಿತರಕರಾಗಿ ಸುಮಾರು 20 ವರ್ಷ ಕೆಲಸ ಮಾಡಿದ್ದಾರೆ. ಬರವಣಿಗೆ ಇವರ ಆಸಕ್ತಿದಾಯಕ ವಿಷಯವಾಗಿದ್ದು, ಬುದ್ದನ ಬೋಧನೆಗಳ ಕುರಿತ ಒಂದು ಪುಸ್ತಕವನ್ನು ಬೆಂಗಳೂರಿನ ʻಮಹಾಬೋಧಿ ಸೊಸೈಟಿʼಗೋಸ್ಕರ ಅನುವಾದ ಮಾಡಿದ್ದಾರೆ. ಹಾಗೆಯೇ ʻಮಹಾತ್ಮ ಗಾಂಧಿ ಜೀವನ ಚರಿತ್ರೆʼ ಪುಸ್ತಕವನ್ನು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸ್ತುತ,‌ ರಾಮಚಂದ್ರ ಅವರು, ದಿವಾಕರ್ ಕಾಲೇಜಿನ ʻಎಜ್ಯುಕೇಶನ್ ಸೊಸೈಟಿʼಯ ಕಾರ್ಯನಿರ್ವಾಹಕ ಅಂಗದ ಸದಸ್ಯರಾಗಿದ್ದಾರೆ. ಜೊತೆಗೆ ಕಾರವಾರದ ʻಫೀಡಿಂಗ್ ದಿ ಹಂಗ್ರಿʼ ಎಂಬ ಸಂಸ್ಥೆಯೊಂದಿಗೆೆ ಕೈಜೋಡಿಸಿದ್ದಾರೆ. ಅನುವಾದಿತ ಕೃತಿ: ಮಹಾತ್ಮ ಗಾಂಧಿ

ರಾಮಚಂದ್ರ ಹಬ್ಬು