`ಮಹಾವೀರ' ಜೀವನ ಚರಿತ್ರೆಯ ಈ ಪುಸ್ತಕವನ್ನು ಸಾಹಿತಿ ಡಾ. ಹಂಪ ನಾಗರಾಜಯ್ಯ ಅವರು ರಚಿಸಿದ್ದಾರೆ. ರಾಜಕುಮಾರನಾಗಿದ್ದವನು ಶಾಶ್ವತ ಸುಖ ಕಂಡುಕೊಳ್ಳಲು ಪದವಿ, ಸುಖ, ವೈಭವ ಎಲ್ಲವನ್ನೂ ತ್ಯಾಗ ಮಾಡಿದ. ಪಾರ್ಶ್ವನಾಥರು ಬೋಧಿಸಿದ ಜೈನಧರ್ಮದ ಅತ್ಯುನ್ನತ ಉದ್ಧಾರ ಮಾರ್ಗವನ್ನನುಸರಿಸಿ ಹನ್ನೆರಡು ವರ್ಷಕ್ಕೂ ಮೀರಿ ತಪಸ್ಸು ಮಾಡಿದ. ದೀಕ್ಷೆಯನ್ನು ಪಡೆದು, ತಾನೇರಿದ ಎತ್ತರಕ್ಕೆ ಇತರರೂ ಏರುವ ಮಾರ್ಗವನ್ನು ತೋರಿಸಿ, ಒಂದು ಮಹಾಧರ್ಮವನ್ನು ಬೆಳಗಿದ ಮಹಾವೀರ ಎಂದು ಈ ಪುಸ್ತಕದಲ್ಲಿ ಪ್ರಸ್ತುತಪಡಿಸಲಾಗಿದೆ. ತಾನೊಬ್ಬ ರಾಜಕುಮಾರನಾಗಿದ್ದರೂ ಸನ್ಯಾಸತ್ವದ ಕಡೆಗೆ ತೆರಳಿದ ಬಗೆ, ಹನ್ನೆರಡು ವರುಷಗಳ ಕಠಿಣ ತಪಸ್ಸಿನ ಹಂತಗಳು. ಜೈನ ಧರ್ಮವನ್ನು ಬೆಳಗಿದ ರೀತಿ ಎಲ್ಲವನ್ನು ಹಂಪನಾ ಅವರು ಈ ಕೃತಿಯಲ್ಲಿ ಸರಳ ಕನ್ನಡದಲ್ಲಿ ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ. ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ. ’ಹಂಪನಾ’ ಕಾವ್ಯನಾಮದಿಂದ ಬರೆಯುವ ನಾಗರಾಜಯ್ಯ ಅವರು ಮೂಲತಃ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದವರು. ಸದ್ಯ ಬೆಂಗಳೂರು ನಗರದ ನಿವಾಸಿ. ತಂದೆ ತಂದೆ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ. ಪ್ರಾಥಮಿಕ, ಆರಂಭಿಕ ಶಿಕ್ಷಣವನ್ನು ಗೌರಿಬಿದನೂರು, ಮಧುಗಿರಿಯಲ್ಲಿ ಪಡೆದ ಅವರು ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ಓದಿದರು. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್), ಎಂ.ಎ ಪದವಿ ಪಡೆದ ನಾಗರಾಜಯ್ಯ ಅವರು ವಡ್ಡಾರಾಧನೆ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ...
READ MORE