ಲೇಖಕ ಅಮ್ಮಸಂದ್ರ ಸುರೇಶ್ ಅವರು ಬರೆದಿರುವ ಮಹಾ ಮಾನವತಾವಾದಿ. ಡಾ.ಅಮ್ಮಸಂದ್ರ ಸುರೇಶ್ ಶೋಷಿತರ ಮತ್ತು ತಳ ವರ್ಗದವರ ಜೀವನವನ್ನು ಚೆನ್ನಾಗಿ ಅರಿತುಕೊಂಡು ಅದನ್ನು ಬರವಣಿಗೆಗೆ ಇಳಿಸುವ ಮೂಲಕ ಈ ನಾಡಿಗೆ ಬಹು ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರ “ಮಹಾ ಮಾನವತಾವಾದಿ” ಕೃತಿ, ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರವರ ಜೀವನ ಮತ್ತು ಸಾದನೆಯನ್ನು ಸರಳವಾಗಿ ಮತ್ತು ಚೆನ್ನಾಗಿ ಕಟ್ಟಿಕೊಟ್ಟಿದೆ.
ಅಮ್ಮಸಂದ್ರ ಸುರೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಅಮ್ಮಸಂದ್ರ ಪೂರೈಸಿ, ಪದವಿ (ಪತ್ರಿಕೋದ್ಯಮ,ಮನೋವಿಜ್ಞಾನ ಮತ್ತು ಐಚ್ಛಿಕ ಕನ್ನಡ)-ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರಿನಲ್ಲಿ, ಹಾಗೂ ಸ್ನಾತಕೋತ್ತರ ಪದವಿ ಮಾಸ್ಟರ್ ಆಫ್ ಸೈನ್ಸ್ ಇನ್ ಕಮ್ಯುನಿಕೇಷನ್ಸ್, ಬೆಂಗಳೂರು ವಿಶ್ವವಿದ್ಯಾಲ ಪೂರ್ಣಗೊಳಿಸಿದರು. ಪಿ,ಹೆಚ್ ಡಿಯನ್ನು ಮಾಧ್ಯಮ ತಜ್ಞರಾದ ಪ್ರೊ.ಎನ್ ಉಷಾರಾಣಿಯವರ ಮಾರ್ಗದರ್ಶನದಲ್ಲಿ “ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ವರದಿ ಹಾಗೂ ಇನ್ನಿತರೆ ಬರಹಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ...
READ MORE