ಸಾಮಾಜಿಕ ಕ್ರಾಂತಿಯ ಹರಿಕಾರ ಲೋಕರಾಜ ಸಯಾಜಿರಾವ್ ಗಾಯಕವಾಡ ಅವರು ಬರೋಡೆಯ ಮಹಾರಾಜರು. ಉದಾತ್ತ ಹಾಗೂ ಜಾತ್ಯತೀತ ಮನೋಭಾವದ ಅರಸರು ಎಂದೇ ಖ್ಯಾತಿ. ರೈತಾಪಿ ವರ್ಗದ ಅಶಿಕ್ಷಿತ ಬಾಲಕನು ಆಕಸ್ಮಿಕವಾಗಿ ಅರಸನಾಗಿ ಉತ್ತಮ ಆಡಳಿತ ನೀಡಿ, ವಿಶೇಷವಾಗಿ ದುರ್ಬಲ ಹಾಗೂ ದಮನಿತ ವರ್ಗದವರ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳ ಮೂಲಕ ಪ್ರೋತ್ಸಾಹಿಸುತ್ತಾರೆ. ಇದರ ಪರಿಣಾಮ ಎಂಬಂತೆ ಮಹಾತ್ಮ ಫುಲೆ, ಡಾ. ಅ೦ಬೇಡ್ಕರ್, ಶಾಹೂ, ಗೋಖಲೆ, ರಾನಡೆ ಇತರರು ಶಿಕ್ಷಣ ಪಡೆದು ಸಮಾಜ ಸುಧಾರಣೆಗಾಗಿ ಹೋರಾಡುವುದಕ್ಕೆ ಲೋಕರಾಜರೇ ಮೂಲ ಕಾರಣ. ಇಂತಹವರ ಬದುಕು- ಸಾಧನೆ ಕುರಿತು ಮರಾಠಿಯಲ್ಲಿ ಬಾಬಾ ಭಾಂಡ ಅವರು ಬರೆದ ಕೃತಿಯನ್ನು ಲೇಖಕ ಚಂದ್ರಕಾಂತ ಪೋಕಳೆ ಕನ್ನಡೀಕರಿಸಿದ್ದಾರೆ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE