ಹಿರಿಯ ಲೇಖಕ ಡಾ. ಎಂ.ಜಿ. ದೇಶಪಾಂಡೆ ಅವರು ಧುರೀಣ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಕುರಿತು ಬರೆದ ವ್ಯಕ್ತಿಚಿತ್ರಣ. ಇವರು ಸಹಕಾರಿ ಕ್ಷೇತ್ರದಲ್ಲಿಯೂ ಅದ್ಭುತವಾದ ಕಾರ್ಯ ಮಾಡಿದ್ದರು. ಹಸಿರು ಕ್ರಾಂತಿಯ ಹರಿಕಾರರೂ ಹೌದು .ಬೀದರ್ ಜಿಲ್ಲೆಯ "ಸಹಕಾರ ಭೀಷ್ಮ" ಎಂದೇ ಕರೆಯುವುದು ವಾಡಿಕೆ. ಇವರ ನಾಯಕತ್ವದಲ್ಲಿ ಸಹಕಾರ ಕೇಂದ್ರ ಬ್ಯಾಂಕ್ ,ಸಕ್ಕರೆ ಕಾರ್ಖಾನೆ ,ಸಹಕಾರಿ ಸಂಘಗಳು, ಭೂ ಅಭಿವೃದ್ಧಿ ಬ್ಯಾಂಕ್ ಮುಂತಾದ ಸಂಸ್ಥೆಗಳು ಪ್ರಗತಿ ಸಾಧಿಸಿವೆ. ಹಳ್ಳಿ ಹಳ್ಳಿಯ ರೈತರು ಆರ್ಥಿಕವಾಗಿ ಸದೃಢವಾಗಿರುವದು ಇಲ್ಲಿ ಉಲ್ಲೇಖನೀಯ .ಅಷ್ಟೇ ಅಲ್ಲದೆ ರಾಜಕೀಯ ರಂಗದಲ್ಲೂ ಪ್ರಸಿದ್ಧಿ. ಬೀದರ್ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಯ ಬಡ ರೈತ ಮಹಿಳೆಯರು ಪುಟ್ಟ ಉಳಿತಾಯ ಮಾಡಿ ತಮ್ಮ ಬಾಳನ್ನು ಹಸನಾಗಿ ಕಟ್ಟಿಕೊಂಡಿದ್ದಾರೆ .ಸ್ವಸಹಾಯ ಸಂಘಗಳ ಹೆಸರಿನಲ್ಲಿ ಬೀದರ್ ಜಿಲ್ಲೆಯ ಅನೇಕ ಹಳ್ಳಿಯ ಮಹಿಳೆಯರು ಸ್ವಾವಲಂಬಿಗಳಾಗಿರುವುದು ಇಲ್ಲಿ ಸ್ಮರಣೀಯ . ಜೊತೆಗೆ ರೈತ ಕೂಟಗಳು ತರಬೇತಿ ಕೇಂದ್ರಗಳು ಹೀಗೆ ಸಾರ್ಥಕ ಕಾರ್ಯಗಳು ಇವರ ಮೂಲಕ ನಡೆದವು.
ಇವರ ಜನನ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಪುಟ್ಟ ಹಳ್ಳಿಯಾದ ನಾಗಮಾರಪಳ್ಳಿ . ಈ ಹಳ್ಳಿಯಿಂದ ತಮ್ಮ ರಾಜಕೀಯ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಮಾಡುತ್ತಾ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವುದು ಗಮನಾರ್ಹ. ಇವರು ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಡಿಯಲ್ಲಿ ಸ್ಥಾಪಿಸಿದ ತರಬೇತಿ ಕೇಂದ್ರಗಳು, ಮಹಿಳೆಯರ ಸ್ವಸಹಾಯ ಸಂಘಗಳು ಇಡೀ ದೇಶಕ್ಕೆ ಮಾದರಿ. ಈ ಸಹಕಾರ ತರಬೇತಿ ಕೇಂದ್ರಗಳ ಮೂಲಕವಾಗಿ ಬೀದರ್ ಜಿಲ್ಲೆ ಹಳ್ಳಿ ಹಳ್ಳಿಯ ಎಲ್ಲಾ ಮಹಿಳೆಯರಿಗೆ ಸ್ವಸಹಾಯ ಸಂಘಗಳೊಂದಿಗೆ ಸ್ವಾವಲಂಬಿಯ ತರಬೇತಿಗಳನ್ನು ನೀಡಲಾಗಿದೆ. ಸಣ್ಣ ಉಳಿತಾಯ ಮಾಡುವುದರೊಂದಿಗೆ ಮಹಿಳೆಯರು ತಮ್ಮ ಸ್ವಂತ ಹಣದಿಂದ ಪುಟ್ಟ ಕಸುಬುಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ ಬಾಳಿದ್ದಾರೆ . ಇದಕ್ಕೆ ಮೂಲ ಸ್ವಾವಲಂಬನೆಯ ಮಂತ್ರವನ್ನು ನೀಡಿದಂಥವರು. ಈ ಗ್ರಾಮದ ಮಹಿಳೆಯರ ಬದುಕನ್ನು ನೋಡಲು ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಅನೇಕ ದಿಗ್ಗಜರು ಬೀದರ್ ಜಿಲ್ಲೆಗೆ ಈ ಪೂರ್ವದಲ್ಲಿ ಬಂದಿರುವುದು ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಹೆಗ್ಗಳಿಕೆ. ಅವರ ಕುರಿತು ಅವರ ಜೀವನದ ನಡೆದು ಬಂದ ದಾರಿಯ ಒಂದಿಷ್ಟು ವಿಷಯಗಳು ಇಲ್ಲಿ ಸಂಗ್ರಹಿಸಿ ಈ ಕೃತಿ ರಚನೆ ಮಾಡಲಾಗಿದೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE