ಪತ್ರಕರ್ತರಾಗಿರುವ ಮತ್ತು ಸಿನಿಮಾ ವಿಚಾರವಾಗಿ ಅತ್ಯಂತ ನಿಚ್ಚಳವಾಗಿ ಮತ್ತು ಆಕರ್ಷಕವಾಗಿ ಬರೆಯುವ ಗಣೇಶ್ ಕಾಸರಗೋಡು ಅವರ ಹೊಸ ಕೃತಿ ಇದು. ಈ ಕೃತಿ ಚಿತ್ರರಂಗದ ದಿಗ್ಗಜರ ಕಡೆಯ ದಿನಗಳು ಹೇಗಿದ್ದವು ಎಂಬುದನ್ನು ಹೇಳುತ್ತದೆ. ಕಾಸರಗೋಡು ಅವರ ಕಥೆ ಹೇಳುವ ಬಗೆಯ ಶೈಲಿಯು ಇಲ್ಲಿನ ಎಲ್ಲ ಬರಹಗಳಿಗೂ ಒಂದು ವಿಭಿನ್ನ ಸ್ಪರ್ಶವನ್ನೇ ನೀಡುತ್ತದೆ. ಇಲ್ಲಿನ ಎಲ್ಲ ಬರಹಗಳೂ ಅಂಥ ಆಪ್ತತೆ ಮತ್ತು ಆರ್ದ್ರತೆಯುಳ್ಳವುಗಳಾಗಿವೆ. ಓದುಗನನ್ನು ಬಹುಕಾಲ ಕಾಡುತ್ತಲೇ ಇರುವ ಕಥನಗಳಿವು.
ಗಣೇಶ್ ಕಾಸರಗೋಡು ಹುಟ್ಟಿದ್ದು ಕಾಸರಗೋಡಿನಲ್ಲಿ ಓದಿದ್ದೂ ಅಲ್ಲೇ. ಎಂ.ಎ. (ಕನ್ನಡ) ಪದವಿಯಲ್ಲಿ ರ್‍ಯಾಂಕ್ ವಿಜೇತರು. ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರ ಬಂದಿದ್ದು ಪತ್ರಿಕೋದ್ಯಮಕ್ಕೆ. ಮೊದಲು 'ಚಿತ್ರ ದೀಪ', ನಂತರ 'ಚಿತ್ರ ತಾರಾ', ಆ ನಂತರ 'ಅರಗಿಣಿ'. ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ', 'ಕರ್ಮವೀರ', 'ವಿಜಯ ಕರ್ನಾಟಕ' ದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ಸದ್ಯಕ್ಕೆ 'ಸುವರ್ಣ ಟೈಂಸ್ ಆಫ್ ಕರ್ನಾಟಕ' ದಲ್ಲಿ ಅಂಕಣಕಾರ. ಪತ್ರಿಕೋದ್ಯಮದ ಸೇವೆ ಗುರುತಿಸಿ - ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ , ಮಂತ್ರಾಲಯದ ವಿಜಯ ವಿಠಲ ಪ್ರಶಸ್ತಿ , ಪತ್ರಕರ್ತರ ವೇದಿಕೆ ಪ್ರಶಸ್ತಿ , ...
READ MORE