About the Author

ಗಣೇಶ್ ಕಾಸರಗೋಡು ಹುಟ್ಟಿದ್ದು ಕಾಸರಗೋಡಿನಲ್ಲಿ ಓದಿದ್ದೂ ಅಲ್ಲೇ. ಎಂ.ಎ. (ಕನ್ನಡ) ಪದವಿಯಲ್ಲಿ ರ್‍ಯಾಂಕ್ ವಿಜೇತರು. ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರ ಬಂದಿದ್ದು ಪತ್ರಿಕೋದ್ಯಮಕ್ಕೆ. ಮೊದಲು 'ಚಿತ್ರ ದೀಪ', ನಂತರ 'ಚಿತ್ರ ತಾರಾ', ಆ ನಂತರ 'ಅರಗಿಣಿ'. ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ', 'ಕರ್ಮವೀರ', 'ವಿಜಯ ಕರ್ನಾಟಕ' ದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ಸದ್ಯಕ್ಕೆ 'ಸುವರ್ಣ ಟೈಂಸ್ ಆಫ್ ಕರ್ನಾಟಕ' ದಲ್ಲಿ ಅಂಕಣಕಾರ.

ಪತ್ರಿಕೋದ್ಯಮದ ಸೇವೆ ಗುರುತಿಸಿ - ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ , ಮಂತ್ರಾಲಯದ ವಿಜಯ ವಿಠಲ ಪ್ರಶಸ್ತಿ , ಪತ್ರಕರ್ತರ ವೇದಿಕೆ ಪ್ರಶಸ್ತಿ , ವಿಶ್ವೇಶ್ವರಯ್ಯ ಪ್ರಶಸ್ತಿ , ಹಲೋ ಗಾಂಧಿನಗರ್ ಪ್ರಶಸ್ತಿ ಹಾಗೂ ವೈಎನೈ ಸಾಹಿತ್ಯ ಪ್ರಶಸ್ತಿ ದೊರಕಿವೆ.

ಚದುರಿದ ಚಿತ್ರಗಳು, ಮೌನ ಮಾತಾದಾಗ, ಹೇಗಿದ್ದ ಹೇಗಾದ ಗೊತ್ತಾ ? ನೆನಪಿನಂಗಳದಲ್ಲಿ ಶಂಕರನಾಗ್, ಬೆಳ್ಳಿ ತೆರೆಯ ಅಮೃತ ಕಳಶ: ರವಿಚಂದ್ರನ್, ಗುರಿ-ಹೆಗ್ಗುರಿ, ಕನ್ನಡದ ಕಣ್ಮಣಿ : ಕಾಳಿಂಗರಾಯರು, ಪ್ರೀಮಿಯರ್ ಬಸವರಾಜಯ್ಯ, ಬಣ್ಣ ಮಾಸಿದ ಬದುಕು, ನೂರು ಚಿತ್ರಗಳು - ನೂರಾರು ನೆನಪುಗಳು-ಚಿಗುರಿದ ಕನಸುಗಳು, ಸ್ಫೂರ್ತಿಯ ಸೆಲೆ: ರಮೇಶ್ ಅರವಿಂದ್ ಹಾಗೂ ಆಫ್ ದಿ ರೆಕಾರ್ಡ್ - ಇವು ಪ್ರಕಟತ ಪುಸ್ತಕಗಳು.

ಗಣೇಶ್‌ ಕಾಸರಗೋಡು

Awards