ಬಿ.ಚಂದ್ರೇಗೌಡ ಅವರ ಕೃತಿ ‘ಲಂಕೇಶ್ ಜೊತೆಗೆ…’. ಲಂಕೇಶ್ ಪತ್ರಿಕೆಯ ಆರಂಭದಿಂದಲೂ ಪತ್ರಿಕೆಯ ಜೊತೆಗಿದ್ದ ಬಿ.ಚಂದ್ರೇಗೌಡ ಅವರು ,ಲಂಕೇಶ್ ರ ಒಡನಾಡಿಗಳಾಗಿದ್ದು ಲಂಕೇಶರ ಕುರಿತು ತಮ್ಮ ಒಡನಾಟದ ವಿಚಾರಗಳನ್ನು ಸವಿಸ್ತಾರವಾಗಿ ಈ ಪುಸ್ತಕದಲ್ಲಿ ದಾಖಲಿಸಿದ್ದರೆ. ಕೃತಿಗೆ ಅಗ್ರಹಾರ ಕೃಷ್ಣಮೂರ್ತಿ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಒಳಪುಟಗಳಲ್ಲಿ ಲಂಕೇಶ್ ನಮ್ಮನ್ನು ರೂಪಿಸಿದ್ದು, ಯು ಈಡಿಯಟ್ ಗೆಟ್ ಔಟ್, ಮಂಡ್ಯದ ಮೊದಲ ಪತ್ರಿಕೆ ಸಭೆ, ಗೋಪಾಲಗೌಡರ ನೆನೆದು ಕಣ್ಣೀರು, ಲಂಕೇಶ್ ಕುಟೀರ, ಮಾಸಾಶನ, ಧನ ಸಹಾಯದ ತನಿಖೆ, ಪವಿತ್ರ ಪ್ರೇಮ, ಎಲ್ಲವೂ ಸರ್ವನಾಶ, ಪತ್ರಿಕೆಗೆ ಇಪ್ಪತ್ತು ವರ್ಷ, ಇಟ್ಟಿಗೆ ಪವಿತ್ರವಲ್ಲ, ತೇಜಸ್ವಿ ಸಂದರ್ಶನ, ಜಯದೇವ ಕವಿಯ ಅಷ್ಟಪದಿ, ಲಂಕೇಶ್ ಮತ್ತು ಕಂಬಾರ ಸೇರಿದಂತೆ 30ಶೀರ್ಷಿಕೆಗಳಿವೆ.
ಕಟ್ಟೆ ಪುರಾಣ ಜನಪ್ರಿಯ ಅಂಕಣದ ಮೂಲಕ ಚಿರಪರಿಚಿತರಾದ ಲಂಕೇಶ್ ಪತ್ರಿಕೆ ಬಹಗಾರರಾಗಿದ್ದ ಬಿ. ಚಂದ್ರೆಗೌಡರು ಮಂಡ್ಯ ಜಿಲ್ಲೆಯ ನಾಗಮಂಗಲದವರು. ಪಿ. ಲಂಕೇಶರ ಪತ್ರಿಕೆಯಲ್ಲಿ ವರದಿಗಾರರಾಗಿ ಹಾಗೂ ಅಂಕಣಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಮುಖ ಕೃತಿಗಳು: ಹೊಸ ಹೆಜ್ಜೆಗಳು, ಹೊಸಳ್ಳಿ ವೃತ್ತಾಂತ, ಲೈಬ್ರರಿಯಲ್ಲಿ ಕಂಡ ಮುಖ (ಕಾದಂಬರಿ), ಹಳ್ಳಿಕಾರನ ಅವಸನ (ಕಥಾ ಸಂಕಲನ), ಜಬೀವುಲ್ಲ ಕೊಟ್ಟಕೋಳಿ, ಕಟ್ಟೆ ಪುರಾಣ ಭಾಗ-1, ಕಟ್ಟೆ ಪುರಾಣ ಭಾಗ-2, ಬಾಹುಬಲಿ ಬುಡದಲ್ಲಿ ಜನಸಾಗರ, ನಾವು ನಾಟಕ ಆಡಿದ್ದೂ (ಹಾಸ್ಯ ಸಂಕಲನ), ಕಟ್ಟೆ ಪುರಾಣ, ಕಡಿದಾಳು ಶಾಮಣ್ಣ, ಧನ್ವಂತರಿ ಚಿಕಿತ್ಸೆ, ಕಲ್ಲು ಕರಗುವ ಸಮಯ, ಚಿನ್ನದ ಚೆಂದಿರ ...
READ MORE