`ಲಕ್ಷ್ಮಣ ಕಾಶೀನಾಥ ಕಿರ್ಲೋಸ್ಕರ್' ಅವರ ಜೀವನಚರಿತ್ರೆಯ ಕೃತಿ ಇದು. ಲೇಖಕಿ ಲಲಿತಮ್ಮ ಡಾ. ಚಂದ್ರಶೇಖರ್ ಅವರು ರಚಿಸಿದ್ದಾರೆ. ಸ್ವಾವಲಂಬನೆಯೇ ಬಾಳಿಗೆ ಅಡಿಪಾಯ ಎಂದು ನಂಬಿದವರು, ಕೆಲಸವೇ ಬಾಳಿನ ಉಸಿರು ಎಂದು ಬದುಕಿದ ಧೀರ. ಬಡ ಸಂಸಾರದಲ್ಲಿ ಹುಟ್ಟಿ ತಮ್ಮ ಬುದ್ಧಿಶಕ್ತಿ, ಸಾಹಸಗಳಿಂದ ದೇಶಕ್ಕೆ ಅಪಾರ ಸೇವೆ ಸಲ್ಲಿಸಿ ಖ್ಯಾತಿವಂತರಾದರು. ಕೈಗಾರಿಕೆಯ ಕ್ಷೇತ್ರದಲ್ಲಿ ಅವರ ಸಾಹಸ-ಸಾಧನೆ ಎರಡೂ ಬೆರಗುಗೊಳಿಸುವಂತಹುದು ಎಂದು ಲಕ್ಷ್ಮಣ ಕಾಶೀನಾಥ ಕಿರ್ಲೋಸ್ಕರ್ ಅವರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಪುಸ್ತಕದಲ್ಲಿ ಲಕ್ಷ್ಮಣ ಕಾಶೀನಾಥ ಕಿರ್ಲೋಸ್ಕರ್ ಅವರ ಬಾಲ್ಯ ಜೀವನ, ದೇಶಸೇವೆಯ ದಿನಗಳು, ಕೈಗಾರಿಕಾ ಸಾಧನೆಗಳು ಹೀಗೆ ಅವರ ಬದುಕಿನ ಮುಖ್ಯ ಘಟನೆಗಳನ್ನು ಲೇಖಕರು ಇಲ್ಲಿ ಚಿತ್ರಿಸಿದ್ದಾರೆ.
ಲಲಿತಮ್ಮ ಡಾ. ಚಂದ್ರಶೇಖರ್ ಅವರು ಓದಿದ್ದು ಎಸ್.ಎಸ್.ಎಲ್.ಸಿ.ವರೆಗೆ. ರಾಷ್ಟ್ರಾಭಾಷಾ ವಿಶಾರದ ಪರೀಕ್ಷೆ ಮುಗಿಸಿದ್ದಾರೆ. 1932 ಅಕ್ಟೋಬರ್ 07ರಂದು ಜನಿಸಿದರು. ತಂದೆ ನಾರಾಯಣಪ್ಪ , ತಾಯಿ ಲಕ್ಷ್ಮೀನರಸಮ್ಮ. ಪ್ರಕಟಿತ ಕೃತಿಗಳು: ಉಡುಗೊರೆ (ಕವನ ಸಂಕಲನ), ಗೌರಿಪೂಜೆ (ಭಕ್ತಿಗೀತೆಗಳು), ಪರಿವರ್ತನೆ (ಕಥಾ ಸಂಕಲನ), ವೈದ್ಯರ ಮಡದಿ (ಜೀವನ ಚರಿತ್ರೆ), ಉಮಾತಂಗಿ (ವ್ಯಕ್ತಿಚಿತ್ರ), ಎಮ್ಮೆಯ ಖೆಡ್ಡಾ (ಹಾಸ್ಯ ಸಾಹಿತ್ಯ), ಆಂಜನೇಯ (ಆಧ್ಯಾತ್ಮಿಕ), ಬಣ್ಣದ ಗಿಲಕಿ (ಮಕ್ಕಳ ಸಾಹಿತ್ಯ), ಲೆಟರ್‌ಪ್ಯಾಡ್ (ಭಾಷಣ ಸಂಗ್ರಹ). ‘ಮಲ್ಲಿಗೆ ಚಪ್ಪರ, ತಪಸ್ವಿಗಳು, ಕೊಡಗಿನ ಗೌರಮ್ಮ, ಸ್ವಾಮಿ ಶಿವಾ ನಂದತೀರ್ಥರು, ವನಸುಮ, ಲಕ್ಷ್ಮಣ ರಾವ್ ಕಿರ್ಲೋಸ್ಕರ್, ರಶ್ಮಿ ಸರ್ಕಸ್ ಕಂಪನಿ, ಜಯಾ, ಮಗು ನೀ ನಗುತಿರು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ‘ಧಾರವಾಡ ...
READ MORE