ಲಲಿತಮ್ಮ ಡಾ. ಚಂದ್ರಶೇಖರ್ ಅವರು ಓದಿದ್ದು ಎಸ್.ಎಸ್.ಎಲ್.ಸಿ.ವರೆಗೆ. ರಾಷ್ಟ್ರಾಭಾಷಾ ವಿಶಾರದ ಪರೀಕ್ಷೆ ಮುಗಿಸಿದ್ದಾರೆ. 1932 ಅಕ್ಟೋಬರ್ 07ರಂದು ಜನಿಸಿದರು. ತಂದೆ ನಾರಾಯಣಪ್ಪ , ತಾಯಿ ಲಕ್ಷ್ಮೀನರಸಮ್ಮ.
ಪ್ರಕಟಿತ ಕೃತಿಗಳು: ಉಡುಗೊರೆ (ಕವನ ಸಂಕಲನ), ಗೌರಿಪೂಜೆ (ಭಕ್ತಿಗೀತೆಗಳು), ಪರಿವರ್ತನೆ (ಕಥಾ ಸಂಕಲನ), ವೈದ್ಯರ ಮಡದಿ (ಜೀವನ ಚರಿತ್ರೆ), ಉಮಾತಂಗಿ (ವ್ಯಕ್ತಿಚಿತ್ರ), ಎಮ್ಮೆಯ ಖೆಡ್ಡಾ (ಹಾಸ್ಯ ಸಾಹಿತ್ಯ), ಆಂಜನೇಯ (ಆಧ್ಯಾತ್ಮಿಕ), ಬಣ್ಣದ ಗಿಲಕಿ (ಮಕ್ಕಳ ಸಾಹಿತ್ಯ), ಲೆಟರ್‌ಪ್ಯಾಡ್ (ಭಾಷಣ ಸಂಗ್ರಹ).
‘ಮಲ್ಲಿಗೆ ಚಪ್ಪರ, ತಪಸ್ವಿಗಳು, ಕೊಡಗಿನ ಗೌರಮ್ಮ, ಸ್ವಾಮಿ ಶಿವಾ ನಂದತೀರ್ಥರು, ವನಸುಮ, ಲಕ್ಷ್ಮಣ ರಾವ್ ಕಿರ್ಲೋಸ್ಕರ್, ರಶ್ಮಿ ಸರ್ಕಸ್ ಕಂಪನಿ, ಜಯಾ, ಮಗು ನೀ ನಗುತಿರು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ‘ಧಾರವಾಡ ವಿದ್ಯಾವರ್ಧಕ ಸಂಘದ ಬಹುಮಾನ, ದಾವಣಗೆರೆ ಮಹಾಲಿಂಗ ಪ್ರಶಸ್ತಿ, ಧಾರವಾಡದ 'ಚಿಲಿಪಿಲಿ' ಮಕ್ಕಳ ಸಾಹಿತ್ಯ ಪ್ರಶಸ್ತಿ, ದಾವಣಗೆರೆ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, 'ಆರ್ಯಭಟ' ಪ್ರಶಸ್ತಿ, 'ಬಂಗಾರ ಪದಕ' ಯುವಜನ ಸೇವಾ ಸಂಸ್ಥೆ ಲಯನ್ಸ್, ಅತ್ಯುತ್ತಮ ಲಯನ್ಸ್ ಅಧ್ಯಕ್ಷೆ ಪ್ರಶಸ್ತಿ ಮೂರುಬಾರಿ, ಪಡುಕೋಣೆ ರಮಾನಂದರಾವ್ ಸ್ಮಾರಕ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ಲಭಿಸಿದೆ.
ಹರಿಹರದಲ್ಲಿ ಮಹಿಳಾ ಸಮಾಜದ ಸ್ಥಾಪನೆ ಮಾಡಿ, ಇಪ್ಪತ್ತು ವರ್ಷಗಳ ಸುದೀರ್ಘ ಕಾಲ ಸ್ಕೌಟ್ಸ್ ಗೈಡ್ಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿ, ನಾಲ್ಕು ಅವಧಿಗೆ ಲಯನ್ಸ್ ಕ್ಲಬ್ ಅಧ್ಯಕ್ಷೆಯಾಗಿ, ಸ್ವಾತಂತ್ರ್ಯ ಹೋರಾಟಗಾರ್ತಿ ಬಿ. ಕಾಮಾಕ್ಷಮ್ಮ ಅವರ ಪುಸ್ತಕವನ್ನು ಅಚ್ಚು ಹಾಕಿಸಿ, ಉಚಿತವಾಗಿ ವಿತರಣೆ ಮಾಡಿದ್ದಾರೆ. 1995 ರಂದು ಹರಿಹರದಲ್ಲಿ ಪ್ರಗತಿಪರ ಬರಹಗಾರರ ಒಕ್ಕೂಟದ ಸ್ಥಾಪನೆಯನ್ನೂ ಮಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.