ಊರುಕೇರಿ ತೊರೆದ ಕವಿಗೆ ಪ್ರೀತಿಯ ನುಡಿನಮನ ಎಂದು ಕವಿ ಸಿದ್ದಲಿಂಗಯ್ಯ ಅವರನ್ನು ನೆನಪಿಸಿಕೊಲ್ಳುವ ಕೃತಿ ‘ಕವಿ ನೆನಪು’. ವಸು ವತ್ಸಲೆ ಇದನ್ನು ಸಂಫಾದಿಸಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದಿರುವ ರಮಾ ಸಿದ್ದಲಿಂಗಯ್ಯ ಅವರು, ಡಾ. ಸಿದ್ಧಲಿಂಗಯ್ಯನವರ ಮೊದಲ ಎರಡು ಕೃತಿಗಳು ಹೊಲೆಮಾದಿಗರ ಹಾಡು ಮತ್ತು ಸಾವಿರಾರು ನದಿಗಳು. ಅವರು ಈ ಎರಡೂ ಕೃತಿಗಳಲ್ಲಿ ಏನು ಹೇಳಿದ್ದಾರೋ, ಯಾವ ಸಮಸ್ಯೆಗಳನ್ನು ಎತ್ತಿದ್ದಾರೋ ಅವುಗಳನ್ನು ತಮ್ಮ ಕ್ರಾಂತಿಕಾರಕ ಧೋರಣಿಗಳಂದ, ಮಾನವೀಯತೆ, ಮನುಷ್ಯತ್ವ, ಸಾಮರಸ್ಯಗಳಿಂದ ಗೆಲ್ಲಲು ಪ್ರಯತ್ನಿಸಿದ್ದಾರೆ. ಅವರು ವಿಧಾನಪರಿಷತ್ತಿನ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಒಳ್ಳೆಯ ಕೆಲಸಗಳನ್ನು ಮಾಡಿ ತಮ್ಮ ಛಾಪು ಮೂಡಿಸಿದ್ದಾರೆ: ಒಬ್ಬ ಮನುಷ್ಯ ತನ್ನ ಸಾಧನೆಯಿಂದ ಕಾಲಾನಂತರವೂ ಹೇಗೆ ಬದುಕಿರುತ್ತಾನೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ಎಂದಿದ್ದಾರೆ.
ವಸು ವತ್ಸಲೆ ಅವರು ಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ... ಸಣ್ಣಕಥೆ ಹಾಗೂ ಕವಿತೆಗಳನ್ನು ಬರೆಯುವ ಹವ್ಯಾಸ... ನಾಲ್ಕು ಸ್ವಂತ ಪುಸ್ತಕಗಳು, ಮೂರು ಸಂಪಾದಿತ ಕೃತಿಗಳನ್ನು ಬರೆದಿದ್ದಾರೆ. ಐದು ಭಾವಗೀತೆಗಳ ಧ್ವನಿ ಸಾಂದ್ರಿಕೆಗಳು ಹೊರ ಬಂದಿವೆ. ನಾಡಿನ ಹಲವು ಪ್ರಸಿದ್ಧ ಗಾಯಕರು ಹಾಡಿದ್ದಾರೆ. ಇತ್ತೀಚೆಗೆ ಒಂದು ಸಿನಿಮಾಕ್ಕೂ ಸಾಹಿತ್ಯ ನೀಡಿದ್ದಾರೆ. ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಸಾಧನಕೇರಿ ಪ್ರತಿಷ್ಠಾನ ವನ್ನು ಸಂಸ್ಥಾಪಿಸಿ ಹಲವು ರಾಷ್ಟ್ರೀಯ ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ. ...
READ MORE