ಲೇಖಕ ರವಿ ರಾ. ಅಂಚನ್ ಅವರು ಬರೆದ ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರ ಜೀವನ ಚಿತ್ರಣದ ಕೃತಿ-ಜ್ಯೋತಿಬಾ ಬೆಳಕು-ಬೆರಗು. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೂ ಶೈಕ್ಷಣಿಕ ಓದಿನ ಪ್ರೇರಣೆಯಾಗಿ ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ದಂಪತಿಯ ಶೈಕ್ಷಣಿಕ ಸೇವೆಯಿತು. ಹೆಣ್ಣಿನ ಓದಿಗೆ ತೀವ್ರ ವಿರೋಧ ಇದ್ದ ಕಾಲಕ್ಕೂ ಪತ್ನಿ ಸಾವಿತ್ರಿಬಾಯಿಗೆ ಶಿಕ್ಷಣ ಸಿಗುವಂತೆ ಅವಕಾಶ ಕಲ್ಪಿಸಿದ್ದು ಜ್ಯೋತಿಬಾ ಫುಲೆ. ಇದಕ್ಕೆ ಅವರು ಏನೆಲ್ಲ ಮಾನಸಿಕ ಹಿಂಸೆ ಅನುಭವಿಸಿದ್ದರು. ದಲಿತರು ಅಸ್ಪೃಶ್ಯರು ಸಹ ಇತರರಂತೆ ಗೌರವದಿಂದ ಬದುಕಬೇಕು ಎಂಬುದು ಜ್ಯೋತಿಬಾ ಅವರ ಕನಸಾಗಿತ್ತು. ಅದಕ್ಕಾಗಿ ಅವರು ಸಾಮಾಜಿಕವಾಗಿ ಅಸಂಖ್ಯ ವಿರೋಧಗಳನ್ನು ಕಟ್ಟಿಕೊಂಡರೂ ಎದೆಗುಂದದೇ ತಮ್ಮ ಆಶಯಗಳಲ್ಲಿ ಹತಾಶೆ ತುಂಬಿಕೊಳ್ಳದೇ ಜೀವನವನ್ನು ಇತರರ ಅಭಿವೃದ್ಧಿಗಾಗಿ ಸವೆಸಿದರು. ಇಂತಹ ಮಾನವೀಯ ಹೃದಯದ ಜ್ಯೋತಿಬಾ ಫುಲೆ ಕುರಿತ ಜೀವನಚಿತ್ರವೇ ಈ ಕೃತಿ.
ತಮ್ಮ ವೈಚಾರಿಕ ಬರೆಹಗಳಿಂದ ಹೆಸರುವಾಸಿಯಾಗಿದ್ದ ಸಾಹಿತಿ-ವಾಗ್ಮಿ ರವಿ ರಾ.ಅಂಚನ್ ಅವರು ಮೂಲತಃ ಉಡುಪಿ ಜಿಲ್ಲೆಯ ಕಾಪುಪಾದೂರು ಮಡಂತೋಟದವರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮುಂಬೈನ ಅಂಧೇರಿಯ ನಿವಾಸಿಯಾಗಿದ್ದರು. ರಿಲಾಯನ್ಸ್ ಸಂಸ್ಥೆಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕ, ಕರ್ನಾಟಕ ಸಂಘ ಮುಂಬಯಿ, ಗೊರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ವೈಚಾರಿಕ ಚಿಂತನೆಗಳಿಂದ ಕನ್ನಡ ನಾಡಿನ ಸಾಹಿತಿಗಳನ್ನು ಚಿಂತನೆಗೆ ಹಚ್ಚಿವಂತೆ ಮಾಡುವ ಲೇಖಕರಾಗಿದ್ದರು. ’ಯಕ್ಷರಂಗ’ ಅವರ ಮೊದಲ ಕೃತಿ. ಅವರು ಸುಮಾರು 21ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಮಾಯಂದಲ್, ಕಲ್ಲುರ್ಟಿ ಅವರ ಇಂಗ್ಲಿಷ್ ಕೃತಿಗಳು. ಇವರ ಒಂದು ಕೃತಿ ಮರಾಠಿ ಅನುವಾದ ...
READ MORE