ಜಾನಪದ ಗಾಯಕ ಬಾಳಪ್ಪ ಹುಕ್ಕೇರಿ ಅವರು ದೇಶದಾದ್ಯಂತ ಜನಪದ ಹಾಡುಗಳನ್ನು ಹಾಡಿ, ಪ್ರಸಿದ್ಧರಾದವರು. ಸಾವಿರಾರು ಜನಪದ ಗೀತೆಗಳನ್ನು ಹಾಡಿ ’ಸಾವಿರ ಹಾಡಿನ ಸರದಾರ; ಎಂದೇ ಖ್ಯಾತಿ. ಈ ಕುರಿತು ಪರಿಚಯಿಸುವ ಕೃತಿ ’ಜನಪದ ಗಾಯಕ ಹುಕ್ಕೇರಿ ಬಾಳಪ್ಪ’.
ಲೇಖಕಿ, ಸಂಗೀತಗಾರ್ತಿ ನಂದಾ ಎಂ. ಪಾಟೀಲ ಅವರು ಮೂಲತಃ ಧಾರವಾಡದವರು. ಸಾಹಿತ್ಯ ಸಂಗೀತ, ಲಲಿತ ಕಲೆಗಳ ಕೌಟುಂಬಿಕ ಪರಿಸರದಲ್ಲಿ ಬೆಳೆದ ಅವರು ತಮ್ಮ 8ನೇ ವಯಸ್ಸಿನಲ್ಲೇ ಸಂಗೀತ ಕಲಿಕೆ ಆರಂಭಿಸಿ, ಸಂಗೀತದಲ್ಲೇ ಚಿನ್ನದ ಪದಕದೊಂದಿಗೆ (1984) ಬಿ.ಎ. ಪದವಿ ಪಡೆದರು. ಕರ್ನಾಟಕ ವಿವಿಯಲ್ಲಿ ಸಂಗೀತದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್ ನಲ್ಲಿ ಪಡೆದರು. ಸಂಗೀತ ವಿಷಯ ವ್ಯಾಪ್ತಿಯಲ್ಲೇ ಅಂದರೆ ಜಾನಪದ ಸಂಗೀತದಲ್ಲಿ (1997) ಕರ್ನಾಟಕ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ವಚನ ಗಾಯನ ಪರಂಪರೆ:ಒಂದು ಸಂಗೀತಾತ್ಮಕ ಅಧ್ಯಯನ) ಪೂರ್ಣಗೊಳಿಸಿದರು. ಜೈಪುರದ ಅತ್ರೌಲೆ ಘರಾಣೆಯ ಡಾ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ವಿದೂಷಿ ಜಯಶ್ರೀ ಪಾಟ್ನಿಕರ್, ಡಾ. ...
READ MORE