ಖ್ಯಾತ ಲೇಖಕ ಡಾ. ಮಲ್ಲಿಕಾರ್ಜುನ ಹಿರೇಮಠ ಅವರ ’ಗಿರಡ್ಡಿ ಗೋವಿಂದರಾಜ’ ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಪರಿಚಯ ಕೃತಿಯಾಗಿದೆ. ಈ ಕೃತಿಯು 12 ಪರಿವಿಡಿಗಳನ್ನು ಹೊಂದಿದ್ದು, ವ್ಯಕ್ತಿ: ಬದುಕಿನ ರೂಪರೇಷೆ, ಅಭಿವ್ಯಕ್ತಿ: ಸೃಜನ, ಕಾವ್ಯ, ಕತೆಗಳು, ಪ್ರಬಂಧಗಳು, ವ್ಯಕ್ತಿ ಚಿತ್ರಗಳು, ಪ್ರಸಂಗಗಳು, ವಿಮರ್ಶೆ, ಕಾವ್ಯ ವಿಮರ್ಶೆ, ಕಾದಂಬರಿ ವಿಮರ್ಶೆ, ನಾಟಕ ಮತ್ತು ರಂಗ ವಿಮರ್ಶೆ, ವಿಮರ್ಶಾ ಮೀಮಾಂಸೆ ಮತ್ತು ವಿಮರ್ಶೆ, ವಿಮರ್ಶೆಯ ಪರಿಕಲ್ಪನೆಗಳು, ಸಂಪಾದನೆ ಮತ್ತು ಅನುವಾದ, ಸಮಾರೋಪ, ಅನುಬಂಧ-1, ಅನುಬಂಧ-2 ಮೊದಲಾದ ವಿಚಾರಗಳನ್ನು ಒಳಗೊಂಡಿದೆ. ಗಿರಡಿ ಗೋವಿಂದರಾಜ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾಗಿದ್ದು, ಸೃಜನಶೀಲ ಲೇಖಕರಾಗಿ ಖ್ಯಾತರಾದವರು. ಸುಮಾರು ಐದು ವರ್ಷಗಳ ಕಾಲ ಕನ್ನಡ ಸಾಹಿತ್ಯ- ವಿಮರ್ಶೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಗಿರಡ್ಡಿಯವರ ಸಾಧನೆ ಅನನ್ಯವಾದದು’ ಎನ್ನುತ್ತಾರೆ ಲೇಖಕರು.
ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು. ‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು. ಅವರ ಸಾಹಿತ್ಯ ಸೇವೆಗೆ ‘ಕನಾಟಕ ...
READ MORE