‘ಫೌಜುದಾರ್ ಬೋರೇಗೌಡ’

Author : ಎಂ. ಎಚ್. ನಾಗರಾಜು

Pages 166

₹ 200.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ, ಬಿ.ಜಿ. ನಗರ- 571448, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ

Synopsys

‘ಫೌಜುದಾರ್ ಬೋರೇಗೌಡ’ ಕೃತಿಯು ಎಂ.ಎಚ್. ನಾಗರಾಜು ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ಹೆಚ್. ಕೆ.ನರಸಿಂಹಮೂರ್ತಿ ಅವರು, ಕರ್ನಾಟಕದ ಬಯಲುಸೀಮೆಯ ಪ್ರಸಿದ್ದ ನಗರ ಗುಬ್ಬಿಯ ಇತಿಹಾಸದಲ್ಲಿ ಬೋರೇಗೌಡರ ಜೀವನ ಸಾಧನೆ ಒಂದು ಸುವರ್ಣ ಅಧ್ಯಾಯ. ಇವರು ಕಬ್ಬಾಳುದುರ್ಗ ಮೂಲದವರು. ಸ್ಥಳೀಯ ಪಾಳೇಗಾರನೋರ್ವನ ಕಿರುಕುಳದಿಂಷದ ತಪ್ಪಿಸಿಕೊಂಡು ಬಂದು, ತುಮಕೂರು ಬಳಿಯ ಬೆಳ್ಳಾವಿ, ಗುಬ್ಬಿಹೊಸಹಳ್ಳಿ ಮತ್ತು ಹೊನ್ನವಳ್ಳಿಗಳಲ್ಲಿ ನೆಲೆಸಿದರು. ತಮ್ಮ ಬುದ್ಧಿಬಲದಿಂದ ಗುಬ್ಬಿಯ ಪಾರುಪತ್ತೆಗಾರರಾಗಿ ಆಯ್ಕೆಯಾದರು. ದಕ್ಷ ಆಡಳಿತ, ಸಮರ್ಥ ನಿರ್ವಹಣೆಗಳಿಂದ ಅಮಲ್ದಾರ್ ಹುದ್ದೆಗೇರಿ, ನಂತರ ಫೌಜುದರರಾಗಿ ನಾಡಿನ ಹಲವು ಕಡೆಗೆಲಳಲ್ಲಿ ಕಂದಾಯ ವಸಲಿ ಮತ್ತು ಸೈನ್ಯ ಶಕ್ತಿಯ ಸೇವೆ ಸಲ್ಲಿಸಿ ಪ್ರಖ್ಯಾತರಾದರು. ಗುಡಿಗೋಪುರ, ಧರ್ಮಛತ್ರ, ತೋಪು, ಕಲ್ಯಾಣಿ ನಿರ್ಮಾಣ ಮೊದಲಾದ ಸಾರ್ವಜನಿಕ ಹಿತಾಶಕ್ತಿಯ ಜನಕಲ್ಯಾಣ, ಸೇವಾಕಾರ್‍ಯಗಳಿಂದಾಗಿ ಮೈಸೂರು ಅರಸರಿಂದ ಸನ್ಮಾನಿತರಾಗಿ ಈ ಭಾಗದ ಜನತೆಯಿಂದ ಪೂಜಿತರಾಗಿದ್ದಾರೆ. ನಿಜಕ್ಕೂ ಇವರ ಬದುಕು ಬಾಳಲ್ಲ, ಜೊಳ್ಳಲ್ಲ; ಗಟ್ಟಿಕಾಳು ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಇಂತಹ ಸಾಧಕರ ಜೀವನ ಕಥನವನ್ನು ಎಂ.ಎಚ್. ನಾಗರಾಜುರವರು ‘ಫೌಜುದಾರ್ ಬೋರೇಗೌಡ’ ಕೃತಿಯಲ್ಲಿ ವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ ಎಂದಿದ್ದಾರೆ.

About the Author

ಎಂ. ಎಚ್. ನಾಗರಾಜು

ಎಂ. ಎಚ್. ನಾಗರಾಜು ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿಯವರು. ಮರಳೇನಹಳ್ಳಿ, ದೊಡ್ಡಬಳ್ಳಾಪುರ, ಬೆಂಗಳೂರುಗಳಲ್ಲಿ ಶಿಕ್ಷಣ ಪೂರೈಸಿ, ರಾಜ್ಯದ ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸದ್ಯ ನಿವೃತ್ತರು. ತುಮಕೂರಲ್ಲಿ ವಾಸವಾಗಿದ್ದಾರೆ. ಏಕಕಾಲದಲ್ಲಿ ಇತಿಹಾಸ-ಸಾಹಿತ್ಯ ಸಮ್ಮಿಲನ, ಜೊತೆಯಲ್ಲಿ ಗಾಂಧಿ, ಅಂಬೇಡ್ಕರ್, ಬಸವ, ಬುದ್ಧರ ಚಿಂತನೆಗಳನ್ನು ಸಮಗ್ರೀಕರಿಸಿದ ರೀತಿಯಲ್ಲಿ ಇವರ ಬರಹಗಳಿವೆ. ಕೃತಿಗಳು :  ಒಕ್ಕಲಿಗರು ಮತ್ತು ಪರಭೇದಗಳು, ಕುಂಚಿಟಿಗರ ಒಕ್ಕಲಿಗರವಲ್ಲವೇ?’, ಮರೆಯಲಾಗದ ಮಾಲಿಮರಿಯಪ್ಪ, ‘ಸಾಧನೆಯ ಹಾದಿಯಲ್ಲಿ ಬಿ.ರಂಗಣ್ಣ’, ‘ಫೌಜುದಾರ್ ಬೋರೇಗೌಡ, ‘ಗುಬ್ಬಿಹೊಸಹಳ್ಳಿ ಪ್ರಭುಗಳು, ‘ಧರ್ಮಪ್ರಕಾಶನ ಡಿ. ಬನುಮಯ್ಯ’, ‘ಸಾಮಾಜಿಕ ಹೋರಾಟಗಾರ W.H ಹನುಮಂತಪ್ಪ ...

READ MORE

Related Books