ಎಂ. ಎಚ್. ನಾಗರಾಜು ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿಯವರು. ಮರಳೇನಹಳ್ಳಿ, ದೊಡ್ಡಬಳ್ಳಾಪುರ, ಬೆಂಗಳೂರುಗಳಲ್ಲಿ ಶಿಕ್ಷಣ ಪೂರೈಸಿ, ರಾಜ್ಯದ ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸದ್ಯ ನಿವೃತ್ತರು. ತುಮಕೂರಲ್ಲಿ ವಾಸವಾಗಿದ್ದಾರೆ. ಏಕಕಾಲದಲ್ಲಿ ಇತಿಹಾಸ-ಸಾಹಿತ್ಯ ಸಮ್ಮಿಲನ, ಜೊತೆಯಲ್ಲಿ ಗಾಂಧಿ, ಅಂಬೇಡ್ಕರ್, ಬಸವ, ಬುದ್ಧರ ಚಿಂತನೆಗಳನ್ನು ಸಮಗ್ರೀಕರಿಸಿದ ರೀತಿಯಲ್ಲಿ ಇವರ ಬರಹಗಳಿವೆ.
ಕೃತಿಗಳು : ಒಕ್ಕಲಿಗರು ಮತ್ತು ಪರಭೇದಗಳು, ಕುಂಚಿಟಿಗರ ಒಕ್ಕಲಿಗರವಲ್ಲವೇ?’, ಮರೆಯಲಾಗದ ಮಾಲಿಮರಿಯಪ್ಪ, ‘ಸಾಧನೆಯ ಹಾದಿಯಲ್ಲಿ ಬಿ.ರಂಗಣ್ಣ’, ‘ಫೌಜುದಾರ್ ಬೋರೇಗೌಡ, ‘ಗುಬ್ಬಿಹೊಸಹಳ್ಳಿ ಪ್ರಭುಗಳು, ‘ಧರ್ಮಪ್ರಕಾಶನ ಡಿ. ಬನುಮಯ್ಯ’, ‘ಸಾಮಾಜಿಕ ಹೋರಾಟಗಾರ W.H ಹನುಮಂತಪ್ಪ ’ ಮೊದಲಾದವುಗಳು.