`ಬೃಹಸ್ಪತಿ' ಪುರಾಣ ಪುರುಷರ ಜೀವನ ಚರಿತ್ರೆಯ ಕೃತಿ ಇದು. ಲೇಖಕ ಸತ್ಯಕಾಮ ರಚಿಸಿದ್ದಾರೆ. ದೇವತೆಗಳಿಗೇ ಮಾರ್ಗದರ್ಶನ ಮಾಡಿದ ಗುರು. ನೀವು ದೇವತೆಗಳಾಗಲೇ ಇಲ್ಲ ಎಂದು ಅವರಿಗೆ ಜ್ಞಾನೋದಯ ಮಾಡಿಸಿ, ದೇವತ್ವವನ್ನು ಕಲಿಸಿಕೊಟ್ಟ,, ತ್ಯಾಗದಲ್ಲಿ ಅಮೃತತ್ವವಿದೆ ಎಂದು ತೋರಿಸಿಕೊಟ್ಟ ಜ್ಞಾನಸಾಗರ ಎಂದು ಬೃಹಸ್ಪತಿಯ ಕುರಿತಾಗಿ ಈ ಕೃತಿಯಲ್ಲಿ ಲೇಖಕರು ವರ್ಣಿಸಿದ್ದಾರೆ. ಬೃಹಸ್ಪತಿಯ ಬಾಲ್ಯ ಜೀವನ, ದೇವತೆಗಳನ್ನು ತನ್ನ ಶಿಷ್ಯರಾಗಿ ಸ್ವೀಕರಿಸಿದ ಹಿನ್ನಲೆ, ತ್ಯಾಗದ ಕುರಿತಾಗಿ ಬೃಹಸ್ಪತಿ ಹೊಂದಿದ ಭಾವ, ದೇವತೆಗಳೊಂದಿಗೆ ಕಳೆದ ದಿನಗಳು ಹೀಗೆ ಬೃಹಸ್ಪತಿಯ ಜೀವನದ ಮುಖ್ಯ ಭಾಗಗಳನ್ನು ಆಯ್ದುಕೊಂಡು ಲೇಖಕರು ಸುಂದರವಾಗಿ ವಿವರಿಸಿದ್ದಾರೆ.
’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...
READ MORE