ಖ್ಯಾತ ಸಾಹಿತಿ ಡಾ. ಎಂ.ಜಿ ದೇಶಪಾಂಡೆ ಅವರು ಭಕ್ತ ಶ್ರೀ ಗೋವಿಂದ ಮಹಾರಾಜರ ಜೀವನ ಚಿತ್ರ ವಿವರಿಸಿದ ಕೃತಿ. ಸ್ಥಳೀಯ ಬೀದರ್ ನಗರದಲ್ಲಿ ಮಹಾನ್ ಮಾಣಿಕಪ್ರಭುಗಳ ಭಕ್ತರಾಗಿ ಬಾಳಿ ಬೆಳಗಿದವರು . ಇವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು, ಬಡತನದಿಂದಾಗಿ ಉದರ ನಿರ್ವಹಣೆ ಕಷ್ಟವಾಯಿತು. ತಾಜ್ಲಾಪುರ್ ದತ್ತಾನಂದ ಮಠದಲ್ಲಿ ವಾಸ ಮಾಡುತ್ತಾರೆ .ಅಲ್ಲಿ ಮಹಾ ಸಂತೆ ಗಂಗೂಬಾಯಿ ತಾಯಿಯ ಕೃಪೆ ಇವರಿಗಾಗುತ್ತದೆ .ಗಂಗೂಬಾಯಿ ತಾಯಿಯ ನೆರವಿನಿಂದ ವ್ಯಾಪಾರ ಮಾಡುತ್ತಿರುವಾಗ ಒಮ್ಮೆ ಶ್ರೀ ಮಾಣಿಕ ಪ್ರಭುಗಳ ದರ್ಶನವಾಗುತ್ತದೆ . ಅವರನ್ನು ಗುರುವಾಗಿ ಸ್ವೀಕರಿಸಿ ತಮ್ಮ ಬಾಳೆಲ್ಲ ಅಧ್ಯಾತ್ಮಕ್ಕೆ ಮೀಸಲಿಡುತ್ತಾರೆ. ನಂತರದ ದಿನಗಳಲ್ಲಿ, ಪ್ರಭುಗಳ ಸಾಕ್ಷಾತ್ಕಾರ ದರ್ಶನದಿಂದ ಇವರ ಬಾಳು ಸಾರ್ಥಕಗೊಳ್ಳುತ್ತದೆ . ಇವರು ತಮ್ಮ ಅಧ್ಯಾತ್ಮದ ಬದುಕಿನಲ್ಲಿ ಅನೇಕ ಪವಾಡಗಳು ಮಾಡುವುದರೊಂದಿಗೆ ಅನೇಕ ಭಕ್ತರಿಗೆ ಉದ್ಧಾರ ಮಾಡುತ್ತಾರೆ .ಈ ಕುರಿತ ವಿವಚರ ಮಾಹಿತಿಯನ್ನು ಕೃತಿಯು ಒಳಗೊಂಡಿದೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE