ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್

Author : ಕೋ. ಚೆನ್ನಬಸಪ್ಪ

Pages 64

₹ 50.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

‘ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್ (ಟಿಪ್ಪು ಸುಲ್ತಾನ್)’ ಕೃತಿಯನ್ನು ಕನ್ನಡದ ಖ್ಯಾತ ಲೇಖಕರಲ್ಲಿ ಒಬ್ಬರಾದ ಚೆನ್ನಬಸಪ್ಪ ಕೋ. ಅವರು ರಚಿಸಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಪ್ರತಿಮ ವೀರ ಟೀಪೂ ಸುಲ್ತಾನ್ ವಿರುದ್ಧ ಬ್ರಿಟಿಷರು ನಡೆಸಿದ ಒಳಸಂಚು ಮತ್ತು ಟೀಪೂ ಹೆಸರನ್ನು ಚರಿತ್ರೆಯಿಂದ ಅಳಿಸಿಹಾಕಲು ಆನಂತರದ ಧರ್ಮಾಂದರು ನಡೆಸಿದ ಸಂಚನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಹಿಂದೂ ದೇವಾಲಯಗಳಿಗೂ ಭಂಡಾರದಿಂದ ಅನರ್ಘ್ಯ ಸಂಪತ್ತನ್ನು ನೀಡಿ ಪರಮತ ಸಹಿಷ್ಣುವಾಗಿದ್ದ ಟೀಪೂವಿನ ನಿಜವಾದ ವ್ಯಕ್ತಿತ್ವವನ್ನು ವಿವರಿಸಿದ್ದಾರೆ.

About the Author

ಕೋ. ಚೆನ್ನಬಸಪ್ಪ
(27 February 1922 - 23 February 2019)

ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...

READ MORE

Reviews

(ಹೊಸತು, ಮಾರ್ಚ್ 2014, ಪುಸ್ತಕದ ಪರಿಚಯ)

ಟೀಪೂ ಸುಲ್ತಾನ್ ಹಿಂದೂ ಧರ್ಮವಿರೋಧಿಯಾಗಿದ್ದ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಆತ ಪರಮತ ಸಹಿಷ್ಣು, ಹಿಂದೂ ಧರ್ಮರಕ್ಷಕನಾಗಿದ್ದ ಎಂಬ ಅಂಶ ಎಷ್ಟು ಜನರಿಗೆ ಗೊತ್ತಿದೆ ? ಅದನ್ನು ಈ ಕೃತಿಯಲ್ಲಿ ಕೋಚೆ ಅವರು ಚಾರಿತ್ರಿಕ ದಾಖಲೆಗಳ ಸಹಿತ ನಮ್ಮ ಮುಂದೆ ಹರಡಿದ್ದಾರೆ. ಮೈಸೂರು ಸಂಸ್ಥಾನದಲ್ಲಿ ಹಿಂದೂ – ಮುಸ್ಲಿಮರು ಶಾಂತಿ-ಸೌಹಾರ್ದತೆಯಿಂದ ಬಾಳಿದ್ದಕ್ಕೆ ಟೀಪೂ ಸುಲ್ತಾನ್ ಕಾಲ ಒಳ್ಳೆಯ

ಉದಾಹರಣೆ, ಬ್ರಿಟಿಷರಿಗೆ ವಸಾಹತು ವಿಸ್ತರಣೆಗೆ ದೊಡ್ಡ ತಲೆನೋವಾಗಿದ್ದ ಟೀಪೂ ಮೈಸೂರಿನ ಹುಲಿಯೆಂದೇ ಖ್ಯಾತನಾಗಿದ್ದ. ಹಿಂದೂ ದೇವಾಲಯಗಳಿಗೆ ಆತ ನೀಡುತ್ತಿದ್ದ ದತ್ತಿಗಳ ಬಗ್ಗೆ ಪ್ರಸ್ತಾಪಿಸುತ್ತ ಶೃಂಗೇರಿಯ ಶಾರದಾ ಪೀಠದ ಸೇವೆಗಾಗಿ ಅಂದಿನ ಸಚ್ಚಿದಾನಂದ ಭಾರತೀ ಜಗದ್ಗುರುಗಳೊಂದಿಗೆ ನಡೆಸಿದ ಪತ್ರವ್ಯವಹಾರಗಳ ದಾಖಲೆಗಳನ್ನೇ ಇಲ್ಲಿ ನೀಡಲಾಗಿದೆ. ಶೃಂಗೇರಿಯ ದೇವಾಲಯದಲ್ಲಿ ಟೀಪೂ ಸುಲ್ತಾನ್ ನೀಡಿದ ಬೆಳ್ಳಿ ಬಂಗಾರದ ಕಿರೀಟ, ಪಲ್ಲಕ್ಕಿಗಳು, ಪಾತ್ರೆಗಳನ್ನು ನವರಾತ್ರೆಯ ಉತ್ಸವದ ಸಂದರ್ಭದಲ್ಲಿ ಉಪಯೋಗಿಸುತ್ತಾರೆ. ಅಷ್ಟಲ್ಲದೆ ಈ ಕೃತಿಯಲ್ಲಿ ಉಲ್ಲೇಖಿಸದಿರುವ ಇನ್ನೊಂದು ಅಂಶವಿದೆ ಟೀಪೂ ನೀಡಿದ ದಿರಿಸು, ಟೊಪ್ಪಿಗೆಯನ್ನು ಧರಿಸಿ ನವರಾತ್ರಿಯಲ್ಲಿ ಒಂದೇ ಒಂದು ದಿನ ಶೃಂಗೇರಿಯ ಸ್ವಾಮಿಯವರು ಪಲ್ಲಕ್ಕಿಯಲ್ಲಿ ದೇವಾಲಯದ ಚೌಕಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ದರ್ಬಾರು ನಡೆಸುವ ರೂಢಿ ಸಂಪ್ರದಾಯ ಇದೆ. ಇವನ್ನೆಲ್ಲ ಕೋಮುವಾದಿಗಳು ಸಾಕಷ್ಟು ಅಡಗಿಸಿಟ್ಟು ಸುಳ್ಳನ್ನೇ ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡು ಮತೀಯ ಭಾವನೆ ಕೆರಳಿಸುತ್ತಿದ್ದಾರೆ. ಟೀಪೂ ಬಗ್ಗೆ ಆರೋಗ್ಯಕರ ಚರ್ಚೆ ಮತ್ತು ದೇಶದಲ್ಲಿನ ಮತೀಯ ಕಂದಕ ಇಲ್ಲವಾಗಿಸಲು ಈ ಕೃತಿಯ ಓದು ಪೂರಕ.

Related Books