ಕವಿ ಜಿ.ಪಿ. ರಾಜರತ್ನಂ ಹೇಳಿರುವಂತೆ ಯೇಸು ಕ್ರಿಸ್ತ ಕೃತಿಯು ಯೇಸುವಿನ ಜೀವನ ಕಥೆಯನ್ನು ಮಕ್ಕಳಿಗಾಗಿ ಸುಲಭವಾಗಿ ಬರೆದ ಕೃತಿ. ಮರಿಯಾಳ ಮಗ ಏಸು. ದೇವರ ಮಗ ಏಸು, ಬೆಟ್ಟದ ಮೇಲಿನ ಬೋಧೆ, ಕ್ರಿಸ್ತನ ಕಾರ್ಯ ಕಲಾಪ, ಪರ ಲೋಕದ ರಾಜ್ಯ, ಯೇಸು ಹೇಳಿದ ಕಥೆಗಳು, ಯೇಸುವಿನ ಕಡೆಯ ದಿನಗಳು, ದಿವ್ಯ ದರ್ಶನ ಸೇರಿದಂತೆ 10 ಅಧ್ಯಾಯಗಳ ಮೂಲಕ ಯೇಸುವಿನ ಇಡೀ ಜೀವನ ಹಾಗೂ ಸಂದೇಶವನ್ನು ತಿಳಿ ಹೇಳಲಾಗಿದೆ. ಇಲ್ಲಿ ಬರುವ ಪಾತ್ರಗಳು ಸನ್ನಿವೇಶಗಳ ಪರಿಚಯದ ಸಂಕ್ಷಿಪ್ತ ಚಿತ್ರಣವನ್ನು ಕೃತಿಯ ಮೊದಲೇ ಕೊಟ್ಟಿದ್ದರಿಂದ ಮಕ್ಕಳು ಯೇಸುವಿನ ಜೀವನ ಕಥೆ ಯನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE