ಯೇಗ್ದಾಗೆಲ್ಲಾ ಐತೆ

Author : ಬೆಳಗೆರೆ ಕೃಷ್ಣಶಾಸ್ತ್ರಿ

Pages 108

₹ 60.00




Year of Publication: 2015
Published by: ಕಾಮಧೇನು ಪ್ರಕಾಶನ
Address: ಕಾಮಧೇನು ಪುಸ್ತಕ ಭವನ, ನಂ-5/1, ನಾಗಪ್ಪ ಸ್ಟ್ರೀಟ್, ಶೇಷಾದ್ರಿಪುರ, ಬೆಂಗಳೂರು- 560020
Phone: 9449446328

Synopsys

‘ಯೇಗ್ದಾಗೆಲ್ಲಾ ಐತೆ’ ಶ್ರೀ ಮುಕುಂದೂರು ಸ್ವಾಮಿಗಳ ನೆನಪು, ವಿಚಾರ, ಆದರ್ಶ ಹಶಾಗೂ ಜೀವನ ದರ್ಶನಗಳನ್ನು ಕಟ್ಟಿಕೊಡುವ ಕೃತಿ ಇದು. ಬೆಳೆಗೆರೆ ಕೃಷ್ಣಶಾಸ್ತ್ರಿ  ಅವರು ಕೃತಿಕಾರರು. ಶ್ರೀ ಮುಕುಂದೂರು ಸ್ವಾಮೀಜಿಗಳ ದಿವ್ಯ ವ್ಯಕ್ತಿತ್ವದ ಪರಿಚಯವನ್ನು ಸವಿಸ್ತಾರವಾಗಿ ಮಾಡಲಾಗಿದೆ.

About the Author

ಬೆಳಗೆರೆ ಕೃಷ್ಣಶಾಸ್ತ್ರಿ
(22 May 1916 - 23 March 2013)

ಸರಳ ಹಾಗೂ ಸಾದಾ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರಾಗಿದ್ದವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಸದಾ ತನ್ನ ಸುತ್ತಲಿನ ಪರಿಸರದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದರು. ಅವರು ಬರೆದದ್ದು ಇರಬೇಕಾದ ಆದರ್ಶದ ಬದುಕನ್ನಲ್ಲ, ಬದುಕೇ ಆದರ್ಶವಾಗುವ ಬಗೆಯನ್ನು. ಅವರ ಬರಣಿಗೆಯಲ್ಲಿ ಸಂಕೇತಗಳು, ಪ್ರತಿಮೆಗಳಾಗಿ, ಪ್ರತಿಮೆಗಳು ಸಂಕೇತಗಳಾಗಿ, ಕೆಲವೊಮ್ಮೆ ಎರಡನ್ನೂ ಮೀರಿದ ಶಕ್ತಿಯಾಗುವುದನ್ನು ಜೀವಾಕ್ಷರವಾಗುವುದನ್ನು ಕಾಣುತ್ತೇವೆ.  ಗಾಂಧೀ, ವಿನೋಬಾ, ರಮಣ ಮಹರ್ಷಿ, ಪರಮಹಂಸ, ಜೆ.ಕೆ.ಮುಂತಾದವರಿಂದ ಪ್ರಭಾವಿತರಾಗಿದ್ದ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಳ್ಳಿಯೊಂದರಲ್ಲಿ ತಮ್ಮಷ್ಟಕ್ಕೆ ತಾವೇ ಸಮಾಜಸೇವೆ ಮಾಡಿಕೊಂಡಿದ್ದರು.  ಯೇಗ್ದಾಗೆಲ್ಲಾ ಐತೆ(ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತ ನೆನಪು), ತುಂಬಿ (ಕವನ ಸಂಕಲನ), ...

READ MORE

Related Books