ಚಿತ್ತಾಲರ ಸಾಹಿತ್ಯದ ಮೇಲೆ ಆಗಿರುವ ಮನೋವಿಜ್ಞಾನದ ದಟ್ಟವಾದ ಪ್ರಭಾವಗಳನ್ನು ಗುರುತಿಸಿರುವುದು ಡಾ. ಸುರೇಶ ನಾಯ್ಕ ಅವರ ಸ್ಪೋಪಜ್ಞತೆಗೆ ಸಾಕ್ಷಿಯಾಗಿದೆ. ತುಂಬಾ ಶ್ರಮವಹಿಸಿ ಶ್ರದ್ಧೆಯಿಂದ ರಚಿಸಿರುವ ಈ ಮಹಾಪ್ರಬಂಧ ಯಶವಂತ ಚಿತ್ತಾಲರ ಸಾಹಿತ್ಯದ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಿರುತ್ತದೆ. ಈ ಸಂಬಂಧವಾಗಿ ಮುಂದೆ ನಡೆಯುವ ಅಧ್ಯಯನಗಳಿಗೆ ಬಹಳ ಉಪಯುಕ್ತ ಕೃತಿಯಾಗಿದೆ.
ಕ್ಷೇತ್ರ ಪರಿಶೀಲನೆ, ಸಂದರ್ಶನಗಳ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿರುವುದು ಈ ಕೃತಿಯ ವಿಶೇಷ. ಕಥಾಸಾರ, ಪಾತ್ರಚಿತ್ರಣ, ತಂತ್ರ, ಕ್ರೌರ್ಯ, ನಗರಪ್ರಜ್ಞೆ, ಸಂಕೇತಗಳು, ಮನೋವೈಜ್ಞಾನಿಕ, ಪ್ರಜ್ಞೆ, ಭಾಷಾ ಶೈಲಿಯ ವಿಶಿಷ್ಟತೆಯನ್ನು ಗುರುತಿಸಿರುವುದು ಸಂಶೋಧಕರ ವ್ಯಾಪಕ ಓದಿಗೆ ನಿದರ್ಶನವಾಗಿದೆ. ಸಂಶೋಧಕರ ವಿಷಯ ವರ್ಗೀಕರಣದಲ್ಲಿ, ನವೀನತೆ ವಿಮರ್ಶೆಯಲ್ಲಿ ಹೊಸ ಆಲೋಚನೆಗಳನ್ನು ಗುರುತಿಸಬಹುದಾಗಿದೆ.
ಕವಿ ವಿಮರ್ಶಕ ಸಂಶೋಧಕ ಸುರೇಶ ನಾರಾಯಣ ನಾಯ್ಕ ಅವರದ್ದು ದಣಿವರಿಯದ ಬರಹ. ಅಪ್ಪಟ ಗ್ರಾಮೀಣ ಪ್ರತಿಭೆ.ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮೂಲತಃ ಉತ್ತರ ಕನ್ನಡದ ಹೊನ್ನಾವರದಲ್ಲಿ 1968 ಜುಲೈ 26ರಂದು ಜನಿಸಿದರು. ಅವರ ಇತ್ತಿಚಿನ ಕವನ ಸಂಕಲನ ‘ಪುರುಷಾರ್ಥ’ 2020ರಲ್ಲಿ ಪ್ರಕಟಣೆ ಕಂಡಿದೆ. ಸಂಶೋಧನ ದೀಪ, ಪುರುಷಾರ್ಥ, ಹೊಳೆಸಾಲು, ವಿಜಯ ಶೋಧ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE