’ಯಕ್ಷಗಾನದ ಸವ್ಯಸಾಚಿ ಅಡೂರು ಶ್ರೀಧರರಾವ್’ ಕೃತಿಯು ಸರೋಜಿನಿ ನಾಗಪ್ಪಯ್ಯ ಕಾಂತಾವರ ಅವರು ಬರೆದಿರುವ ಕೃತಿ. ಅಡೂರು ಶ್ರೀಧರ ರಾವ್ ಅವರ ಏಕವ್ಯಕ್ತಿ ಬದುಕಿನ ಚಿತ್ರಣ ಹಾಗೂ ಸಾಧನೆಗಳ ಕುರಿತ ಕೃತಿಯಾಗಿದೆ. ಅಡೂರು ಶ್ರೀಧರ ರಾವ್ ಅವರು ಯಕ್ಷಗಾನದ ಭವ್ಯತೆಗೆ ಬದುಕನ್ನು ಮುಡಿಪಾಗಿಟ್ಟು, ಕಲಾಸೇವೆಯಲ್ಲಿಯೇ ಮಿಕ್ಕ ಕಷ್ಟಕಾರ್ಪಣ್ಯಗಳನ್ನು ಮರೆತು, ತೃಪ್ತಿ ಕಂಡುಕೊಂಡವರು. ಅಡೂರು ಅವರನ್ನು ಕಲಾರಾಧನೆಯ ಕಲಾರಾಧಕ ಎಂದು ಕರೆಯುತ್ತಾರೆ. ಯಕ್ಷಗಾನದ ಹಿರಿಮೆಯನ್ನು ನಾಡಿನಾದ್ಯಂತ ಪಸರಿಸಿದ ಹಿರಿಮೆಯು ಅಡೂರು ಶ್ರೀಧರರಾವ್ ಅವರಿಗೂ ಸಲ್ಲುತ್ತದೆ. ಯಕ್ಷಕಲಾ ಸಾರಥಿಯಾಗಿ ಹಲವಾರು ಸಾಧನೆಗಳನ್ನು ಮಾಡಿದ್ದು, ಅವರು ನಡೆದಲ್ಲೆಲ್ಲಾ ಸಾಧನೆಯ ಪಡಿಯಚ್ಚು ಮೂಡಿದೆ ಎನ್ನುತ್ತಾರೆ ಲೇಖಕರು.
ಅಸಂಖ್ಯ ಸನ್ಮಾನ ಪ್ರಶಸ್ತಿಗಳ ಸರದಾರರಾಗಿರುವ ಅವರಿಗೆ ಮೂನ್ನೂರಕ್ಕೂ ಹಲವು ಪ್ರಶಸ್ತಿಗಳು ಸಂಧಿರುತ್ತವೆ. ಆಡೂರ ಶ್ರೀಧರ ರಾಯರು ರಚಿಸಿದ ’ಯಕ್ಷಗಾನ ವರ್ಣವೈಭವ’ ತೆಂಕು ಪ್ರಕಾರದಲ್ಲಿ ಯಕ್ಷಗಾನದ ಅಭಿರುಚಿಗಳನ್ನು ಭಿನ್ನವಾಗಿ ತೆರೆದಿಟ್ಟಿದ್ದಾರೆ. ಯಕ್ಷಗಾನದ ಧಾರ್ಮಿಕ ಹಿನ್ನೆಲೆ, ಯಕ್ಷಗಾನದ ಶ್ರಾವ್ಯಾಂಶಗಳು, ಯಕ್ಷಗಾನದ ದೃಶ್ಯಾಂಶಗಳು, ಯಕ್ಷಗಾನದ ವೇಷಭೂಷಣಗಳಲ್ಲಿ ಪರಂಪರೆ ಹಾಗೂ ಯಕ್ಷಗಾನ ಪರಂಪರೆಯ ಪ್ರಯೋಗಗಳು ಐದು ವಿಭಾಗಗಳ ದಾಖಲೀಕರಣದೊಂದಿಗೆ ಶ್ರೀಧರ ರಾಯರು ಪುಸ್ತಕವನ್ನು ತೆರೆದಿಟ್ಟಿದ್ದಾರೆ. ವೇಷ ಕೀರಿಟಗಳ ವೈವಿಧ್ಯತೆ ರಾಯರ ದೃಷ್ಟಿಯಲ್ಲಿ ಭಿನ್ನವಾಗಿ ಮೂಡಿದ್ದು, ಪ್ರತಿಯೊಂದು ಪಾತ್ರಗಳ ವೇಷಭೂಷಣವನ್ನು ವಿವರಿಸುತ್ತಾರೆ. ವೇಷಗಳ ಅಲಂಕಾರಕ್ಕೆ ಪೀಠಿಕೆ ವೇಷಾಲಂಕಾರ ಹೀಗಿದ್ದರೆ ಚೆನ್ನ ಎನ್ನುವ ಲೇಖಕರು ಪುರುಷ ಪಾತ್ರ ಹಾಗೂ ಸ್ತ್ರೀ ಪಾತ್ರಗಳ ಕುರಿತು ವಿಶ್ಲೇಷಿಸಿದ್ದಾರೆ. ಬಣ್ಣದ ವೇಷ ವಿನ್ಯಾಸಗಳ ಕುರಿತು ಮಾತಾಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ
ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಅವರು ಮೂಲತಃ ಕಾಂತಾವರದವರು. ಪ್ರಸ್ತುತ ನಿವೃತ್ತ ಶಿಕ್ಷಕಿ. ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನೆಲೆಸಿದ್ದಾರೆ. ಅವರ ಹಲವಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಸಾಕ್ಷರತಾ ಆಂದೋಲನ, ಪರಿಸರ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಂಸ್ಕೃತಿಕ ಸೇವೆಗೆ ನಿಂತವರು. ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗಳು, ದೆಹಲಿಯ ಬಾಬು ಜಗಜೀವನರಾಂ ಫೌಂಡೇಶನ್ ನೀಡುವ ಸಾವಿತ್ರಿ ಬಾಯಿ ಫುಲೆ ನ್ಯಾಷನಲ್ ಫೆಲೋಶಿಪ್ ಅವಾರ್ಡ್ ಇತ್ಯಾದಿ ಪ್ರಶಸ್ತ್ತಿಗಳು ಸಂದಿವೆ. ‘ಪ್ರಸ್ತುತ’ ಅವರ ಪ್ರಮುಖ ಕೃತಿ. ...
READ MORE