ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ಶಾಸ್ತ್ರಜ್ಞ ವ್ಲಜಿಮೀರ್ ಜೆ ಪ್ರಾಪ್ ರಷ್ಯಾದ ವಿದ್ವಾಂಸ. ಇವರು ಜರ್ಮನ್ ಭಾಷಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. ಜನಪದ ಕತೆಗಳ ರೂಪತತ್ವ, ಅದ್ಭುತ ಕತೆಗಳ ಐತಿಹಾಸಿಕ ಬೇರುಗಳು,ಅದ್ಭುತ ಕತೆಗಳ ಮೂಲ, ರಷ್ಯಾದ ಗ್ರಾಮೀಣ ಹಬ್ಬಗಳು, ರಷ್ಯನ್ ಮಹಾಕಾವ್ಯದ ಐತಿಹಾಸಿಕ ವಿಧಾನಗಳ ಕುರಿತು ಈ ಕೃತಿಯು ಚರ್ಚಿಸಿದೆ. ಅಂಬಳಿಕೆ ಹಿರಿಯಣ್ಣ ಅವರು ಕೃತಿಯ ಕರ್ತೃ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿಗಳಾಗಿರುವ ಅಂಬಳಿಕೆ ಹಿರಿಯಣ್ಣ ಅವರು ಹಿರಿಯ ಜಾನಪದ ವಿದ್ವಾಂಸರು. ’ಜಾನಪದದಿಂದ ಬೆಳೆದವರೇ ಹೆಚ್ಚು; ಆದರೆ ಜಾನಪದವನ್ನು ಬೆಳೆಸಿದವರು ಕಡಿಮೆ. ಈ ಕಡಿಮೆ ಜನರಲ್ಲಿ ಒಬ್ಬರು ಅಂಬಳಿಕೆ ಹಿರಿಯಣ್ಣ’ ಎಂದು ಹಿರಿಯ ವಿದ್ವಾಂಸ ಎಂ.ಎಂ. ಕಲಬುರ್ಗಿ ಅಭಿಪ್ರಾಯಪಟ್ಟಿದ್ದರು. ...
READ MORE