ಟಿಬೆಟ್ಟಿನ ಯೋಗಿ ಮಿಲರೇಪ

Author : ಸಾ. ಕೃ. ರಾಮಚಂದ್ರರಾವ್

Pages 138

₹ 3.00




Year of Publication: 1955
Published by: ಕಾವ್ಯಾಲಯ ಪ್ರಕಾಶನ
Address: ಮೈಸೂರು

Synopsys

ಹಿರಿಯ ಸಾಹಿತಿ ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರ ಕೃತಿ-ಟಿಬೆಟ್ಟಿನ ಯೋಗಿ ಮಿಲರೇಪ. ಹಿಮಾಲಯದ ಅಂಚಿನ ಟಿಬೇಟ್ ಹಾಗೂ ಸುತ್ತಮುತ್ತಲಿನ ದೇಶಗಳಲ್ಲಿ ತೀರಾ ಪರಿಚಿತ ಹೆಸರು-ಮಿಲರೇಪ. ಈತ ತನ್ನ ತಪಶ್ಚರ್ಯದಿಂದ ದುರ್ಲಭವಾದ ಅಲೌಕಿಕ ಸಿದ್ಧಿಗಳನ್ನು ಪಡೆದಿದ್ದ ಎಂದು ನಂಬಲಾಗುತ್ತಿದೆ. ಗೌತಮ ಬುದ್ಧನ ಧರ್ಮಾದೇಶಗಳಿಂದ ಪ್ರೇರಿತನಾಗಿ ಕಟ್ಟಾ ಬೌದ್ಧ ಧರ್ಮದ ಅನುಯಾಯಿಯಾಗಿದ್ದ ಈತ ದಾರ್ಶನಿಕನೂ, ಕವಿಯೂ ಆಗಿದ್ದ. ಸುಮಾರು 800 ವರ್ಷಗಳಾಚೆ ಬದುಕಿದ್ದ ಎಂದು ತಿಳಿದು ಬರುತ್ತದೆ. ಲಾಮಾ ಪಂಥದ ಪ್ರವರ್ತಕ ಧರ್ಮ ಸಂಭವ. ನಂತರ ಬಂದ ಸುಧಾರಕರ ಪೈಕಿ ಮಿಲರೇಪ ಒಬ್ಬರು. ಮಿಲರೇಪನ ಶಿಷ್ಯ-ದ್ವಗ್ -ವೋ-ಲಿರ್ಬೆ. ಆತ ಮಿಲರೇಪನ ಕುರಿತು ಬರೆದಿದ್ದಾನೆ. ಮಿಲರೇಪ ಎಂದರೆ ಹತ್ತಿ ಬಟ್ಟೆ. ಟಿಬೆಟ್ಟಿನ ಚಳಿಯಲ್ಲೂ ಆತ ಹತ್ತಿಯ ಬಟ್ಟೆಯನ್ನು ಧರಿಸುತ್ತಿದ್ದ ಎಂದು ಉಲ್ಲೇಖಿಸಿದ್ದಾನೆ. ‘ಮಿಲರೇಪನ ಕಥೆ’ ಕೃತಿಯು ಜರ್ಮನ್ ಭಾಷೆಯಲ್ಲಿದೆ. ಅದರ ಮೂಲ ಅನುವಾದ ಇದಲ್ಲ. ಸುದೀರ್ಘವಾದ 12 ಅಧ್ಯಾಯಗಳ ಕೃತಿ ಇದು. ಮಿಲರೇಪನ ವ್ಯಕ್ತಿತ್ವ ವರ್ಣನೆ ಒಳಗೊಂಡಿದೆ ಎಂದು ಪ್ರಸ್ತಾವನೆಯಲ್ಲಿ ಲೇಖಕರು ತಿಳಿಸಿದ್ದಾರೆ. 

About the Author

ಸಾ. ಕೃ. ರಾಮಚಂದ್ರರಾವ್
(04 September 1927 - 02 February 2006)

ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...

READ MORE

Related Books