ತ್ರಿಸ್ಟಾವೊ ಬ್ರಗಾನ್ಝ ದೆ ಕುನ್ಹ ಅವರೊಬ್ಬ ಹೋರಾಟಗಾರ. ಆದರೆ ರಾಜಕೀಯ ಪಕ್ಷದಲ್ಲಿ ನೆಲೆ ಕಟ್ಟಿಕೊಂಡವರಲ್ಲ. ಅವರು ಎಲ್ಲ ಜಾತಿ, ಮತ, ಧರ್ಮದವರನ್ನೂ ಪ್ರೀತಿಸಿದವರು. ಆದರೆ ಜಾತ್ಯತೀತ ಸಿದ್ಧಾಂತಿಯಾಗಿ ಗುರುತಿಸಿಕೊಂಡವರಲ್ಲ. ಪುರಾತನ ಗೋಮಾಂತಕದ ಚರಿತ್ರೆಯಿಂದ ಆಧುನಿಕ ಗೋವಾ ರೂಪುಗೊಂಡ `ಬಗೆ' ಹಾಗೂ ಅದರ ತಳಹದಿಯಾಗಿ ಬ್ರಗಾನ್ಝ ದೆ ಕುನ್ಹ ಅವರ ಚಿಂತನೆಗಳು ಭಾರತೀಯ ಮನಸಿನ ವಿಕಾಸಕ್ಕೆ ನೀಡಿದ ಕೊಡುಗೆಯ ನಿರೂಪಣೆ ಇಲ್ಲಿದೆ. ಫಾದರ್ ಬೇಸಿಲ್ ವಾಸ್ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MOREತ್ರಿಸ್ಟಾವೊ ಬ್ರಗಾನ್ಝ ಕುನ್ಹ ಕೃತಿಯ ಲೇಖಕ ಅರವಿಂದ ಚೊಕ್ಕಾಡಿ ಅವರ ಮಾತುಗಳು.