ತೆನಾಲಿರಾಮಕೃಷ್ಣ ಎಂಬ ಪುಸ್ತಕವು ಸಿ. ಕೆ. ವೆಂಕಟರಾಮಯ್ಯ ಅವರ ಕೃತಿಯಾಗಿದೆ. ಈ ಪುಸ್ತಕದಲ್ಲಿ ತೆನಾಲಿರಾಮಕೃಷ್ಣ ನ ಜೀವನವನ್ನು ಬಹಳ ವಿಶೇಷವಾಗಿ ವರ್ಣಿಸಲಾಗಿದೆ. ಹಾಗೂ ಆತನ ಹಾಸ್ಯ ವಿಚಾರಗಳ ಹೊರತಾಗಿ ಈ ಪುಸ್ತಕವನ್ನು ಹೊರತರಲಾಗಿದೆ.
ಚನ್ನಪಟ್ಟಣ ತಾಲೂಕಿನ ಪೊಟ್ಳು ಗ್ರಾಮದಲ್ಲಿ 1896ರ ಡಿಸೆಂಬರ್ 10 ರಂದು ಜನಿಸಿದ ಸಿ.ಕೆ.ವೆಂಕಟರಾಮಯ್ಯ ಅವರು ತಂದೆ ಕೃಷ್ಣಪ್ಪ ; ತಾಯಿ ನಂಜಮ್ಮ.ಅವರ ಪುತ್ರರು. ಚನ್ನಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ. ಪದವಿ, ಮುಂಬಯಿಯಲ್ಲಿ ಎಂ.ಎ, ಹಾಗೂ ಎಲ್.ಎಲ್.ಬಿ ಪದವಿ ಪಡೆದರು. ಶ್ರೀರಂಗಪಟ್ಟಣದಲ್ಲಿ ವಕೀಲಿ ವೃತ್ತಿ, ನಂತರ ಮೈಸೂರು ಸರಕಾರದ ಭಾಷಾಂತರ ಇಲಾಖೆಯಲ್ಲಿ ಸೇವೆ, ತದನಂತರ, ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಮೊದಲ ನಿರ್ದೇಶಕರಾದರು. ಕಥಾಸಂಕಲನ: ಹಳ್ಳಿಯ ಕಥೆಗಳು, ತುರಾಯಿ ನಾಟಕ: ಸುಂದರಿ, ನಚಿಕೇತ, ಮಂಡೋದರಿ, ನಮ್ಮ ಸಮಾಜ, ಬ್ರಹ್ಮವಾದಿ, ಮತ್ತು ಭಾಸ ಹಾಗೂ ಕಾಳಿದಾಸರ ಕೃತಿಗಳ ಬಗೆಗೆ ವಿಮರ್ಶೆ ಬರೆದಿದ್ದಾರೆ. ಬುದ್ಧ, ಪೈಗಂಬರ, ಲಿಂಕನ್, ...
READ MORE