ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಗೆ 75 ವರ್ಷ ತುಂಬಿದ ಸಂದರ್ಭಕ್ಕೆ 2009ರಲ್ಲಿ ಹೊರತಂದ ಅಮೃತಮಹೋತ್ಸವ ಪ್ರಕಟಣೆಗಳಲ್ಲಿ ಲಕ್ಷ್ಮಣ ಕೊಡಸೆ ಅವರ ಈ ಕೃತಿಯೂ (ಟಿ.ಆರ್.ನರಸಿಂಹರಾಜು) ಒಂದು. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು “ಕನ್ನಡ ಚಿತ್ರರಂಗದಲ್ಲಿ ಹಾಸ್ಯಕ್ಕೆ ನವಿರುತನ ತುಂಬಿ ವಿಭಿನ್ನ ನೆಲೆ ನೀಡಿದ ಪ್ರಮುಖರು ತಿಪಟೂರು ರಾಮರಾಜು ನರಸಿಂಹರಾಜು (ಟಿ.ಆರ್.ನರಸಿಂಹರಾಜು). ಚಿತ್ರವೊಂದರಲ್ಲಿ ಹಾಸ್ಯಪಾತ್ರವು ನಾಯಕ ಪಾತ್ರಕ್ಕೆ ಪೂರಕವಾಗಿದ್ದೂ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳುವಂತೆ ಮಾಡಿದ ಪ್ರತಿಭಾ ಶಕ್ತಿ ನರಸಿಂಹರಾಜು ಅವರಿಗೆ ಸಲ್ಲುತ್ತದೆ. ನರಸಿಂಹರಾಜು ಅವರ ಬದುಕಿನ ಬಣ್ಣಗಳು ಪಡೆದ ಸ್ಥಿತ್ಯಂತರಗಳನ್ನು ಸಮರ್ಥವಾಗಿ ನಿರೂಪಿಸಿದ್ದಾರೆ” ಎಂದು ಕೃತಿ ಕುರಿತು ಪ್ರಶಂಸಿಸಿದ್ದಾರೆ.
ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು. ...
READ MORE