ಸ್ವರ ಸಾಮ್ರಾಟ ಎಸ್. ಪಿ ಬಾಲಸುಬ್ರಹ್ಮಣ್ಯಂ

Author : ವಿ. ಹನುಮಂತಪ್ಪ

Pages 182

₹ 300.00




Year of Publication: 2020
Published by: ಜಿಲ್ಲೆ ಸಮಾಚಾರ ದಿನಪತ್ರಿಕೆ
Address: ದಾವಣಗೆರೆ
Phone: 9740112249

Synopsys

‘ಸ್ವರ ಸಾಮ್ರಾಟ ಎಸ್. ಪಿ ಬಾಲಸುಬ್ರಹ್ಮಣ್ಯಂ’ ಕೃತಿಯು ವಿ. ಹನುಮಂತಪ್ಪ ಅವರ ಲೇಖನಗಳ ಸಂಕಲನವಾಗಿದೆ. ಎಸ್.ಪಿಬಿ ಅವರು ಸ್ವರ ಸಾಮ್ರಾಟರಾದ ಹಾದಿಯನ್ನು ಕಟ್ಟಿಕೊಟ್ಟಿದ್ದು , ಅವರ ಜೀವನ ಕಥನವೂ ಆಗಿದೆ. ಅವರ ಬಾಲ್ಯ ದಿನಗಳಿಂದ ಹಿಡಿದು ಗಾನ ಲೋಕದಲ್ಲಿ ಸಾಧನೆ ಮಾಡಿದ ಘಟ್ಟದವರೆಗಿನ ಬರವಣಿಗೆಗಳು ಇಲ್ಲಿವೆ. 17ನೇ ವಯಸ್ಸಿನಲ್ಲಿ ಡ್ರಾಮಾ ಮ್ಯೂಸಿಕ್ ಸ್ಪರ್ಧೆಯಲ್ಲಿ ಹಾಡಿದ್ದು, ಎಸ್. ಜಾನಕಿ ನುಡಿದ ಭವಿಷ್ಯದಿಂದ ಹಿಡಿದು ಪ್ರತಿ ಘಟನೆಗಳನ್ನು ದಾಖಲಿಸುತ್ತಾ ಹೋಗುವುದರ ಜೊತೆಗೆ, ಬಾಲ್ಯದಿಂದ ಸಾಯುವವರೆಗಿನ ಎಲ್ಲ ಛಾಯಾ ಚಿತ್ರಗಳ ಸಂಗ್ರಹವನ್ನೇ ‘ಸ್ವರ ಸಾಮಾಟ್ರ’ ನೀಡುತ್ತಿದೆ. ನಟ ರಾಜಕುಮಾರ್ ಸಹಿತ ಹಲವಾರು ನಟರ ಎದೆಯೊಳಗಿನ ಅಭಿಪ್ರಾಯ, ಹಂಸಲೇಖರಂತಹ ಮೇರು ಸಂಗೀತ ಸಾಹಿತಿಗಳ ಮನದಾಳದ ಮಾತುಗಳು, ಬಾಲಸುಬ್ರಹ್ಮಣ್ಯಂ, ಪಿ.ಸುಶೀಲ ಗಾಯನ ಜುಗಲ್ ಬಂದಿ ಹೀಗೆ ಹಲವಾರು ಹಾಡುಗಳ ವಿವರಣೆ ಹಾಗೂ ವಿಚಾರಗಳನ್ನು ಕಟ್ಟಿಕೊಟ್ಟಿದ್ದಾರೆ.

About the Author

ವಿ. ಹನುಮಂತಪ್ಪ

ಲೇಖಕ ವಿ. ಹನುಮಂತಪ್ಪ ಅವರು ಮೂಲತಃ ದಾವಣಗೆರೆಯವರು. ಹಿರಿಯ ಪತ್ರಕರ್ತರು.  ಕೃತಿಗಳು :  ಸ್ವರ ಸಾಮ್ರಾಟ ಎಸ್. ಪಿ ಬಾಲಸುಬ್ರಹ್ಮಣ್ಯಂ ...

READ MORE

Reviews

https://www.prajavani.net/district/davanagere/sp-balasubrahmanyam-book-is-unveiling-after-one-year-death-anniversary-869701.html(ಪ್ರಜಾವಾಣಿ)

----

ಸ್ವರ ಸಾಮ್ರಾಟ ಎಸ್. ಪಿ. ಬಿ ಬಾಲಸುಬ್ರಹ್ಮಣ್ಯಂ ಕೃತಿಯ ವಿಮರ್ಶೆ

ತೆಲುಗುನಾಡಿನಲ್ಲಿ ಜನಿಸಿದರೂ, ಕನ್ನಡನಾಡಿನ ಸಂಗೀತ ಪ್ರಿಯರ ಹೃದಯವನ್ನು ಈ ಮಹಾನ್ ಗಾಯಕ ಗೆದ್ದ ಪರಿ ಮಾತ್ರ ಅದ್ಭುತ! ಬಹುಷಃ ಎಸ್. ಪಿ ಬಾಲ ಸುಬ್ರಹ್ಮಣ್ಯಂ ಅವರು ಕರ್ನಾಟಕದ ಜನರ ಮನಸ್ಸಿನಲ್ಲಿ ನೆಲೆ ನಿಂತ ರೀತಿಗೆ ಇನ್ನೊಂದು ಹೋಲಿಕೆ ಇಲ್ಲವೇನೋ! ಎಸ್. ಪಿ. ಬಿ, ಅವರ ಕುರಿತು ರೂಪುಗೊಂಡಿರುವ ಈ ಪುಸ್ತಕವನ್ನು ರಚಿಸಿದವರು ದಾವಣಗೆರೆಯ ಪತ್ರಕರ್ತ ವಿ. ಹನುಮಂತಪ್ಪ. ಆಕರ್ಷಕ ಮುಖಪುಟ ಮತ್ತು ಮುದ್ರಣದೊಂದಿಗೆ ಹೊರಬಂದಿರುವ ಈ ಪುಸ್ತಕದಲ್ಲಿ ಅವರ ಆರಂಭಿಕ ಸಂಗೀತ ಸಾಧನೆಯಿಂದ ಆರಂಭಿಸಿ, ಚಿತ್ರರಂಗದಲ್ಲಿ ಹಾಡಲು ಆರಂಭಿಸಿದ್ದ, ನಟನಾಗಿ ಮಿಂಚಿದ್ದು, ವಿವಿಧ ಪ್ರಖ್ಯಾತ ನಟರೊಂದಿಗೆ ಒಡನಾಡಿದ್ದು, ಕೌಟುಂಬಿಕ ವಿಚಾರ ಈ ಎಲ್ಲದರ ವಿವರಗಳಿವೆ. ಪುಸ್ತಕದಲ್ಲಿ ನೂರಾರು ಅರ್ಥಪೂರ್ಣ ಪೊಟೋಗಳಿವೆ. ಎಸ್. ಪಿ,ಬಿ ಅವರ ಕುರಿತು ಒಂದು ಪುಸ್ತಕವಿದು.

 

Related Books