ಸಾಹಿತಿ ಹಾಗೂ ಲೇಖಕ ಡಾ. ಶ್ರೀಶೈಲ ನಾಗರಾಳ ಅವರ ಕೃತಿ-ಸ್ವಾಮಿ ವಿವೇಕಾನಂದ. ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ದಾರ್ಶನಿಕರಲ್ಲಿ ಭಾರತದ ಸ್ವಾಮಿ ವಿವೇಕಾನಂದರು ಒಬ್ಬರು. ಅವರು ಉತ್ತಮ ಜೀವನ, ಅಧ್ಯಾತ್ಮಿಕ ಚಿಂತನೆ, ಯುವಕರಾದಿಯಾಗಿ ಪ್ರತಿಯೊಬ್ಬರ ಹೃದಯದಲ್ಲಿ ನಿರ್ಭಯ, ಸ್ಪೂರ್ತಿದಾಯಕ ಸಂದೇಶಗಳಿಂದ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿರುವರು. ಅವರು ಹಚ್ಚಿಟ್ಟ ಅರಿವಿನ ದೀವಿಗೆಯು ಇಂದಿಗೂ ಕೂಡ ಜಗತ್ತಿಗೆ ಬೆಳಕು ಕೊಡುತ್ತಿದೆ. ಅಮೆರಿಕೆಯ ಶಿಕಾಗೋದಲ್ಲಿ ಮೊಟ್ಟಮೊದಲನೆಯ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡ ಮೊದಲ ಯೋಗಿಯಾಗಿ ಆ ಮೂಲಕ ಜಗತ್ತಿನ ದೃಷ್ಟಿಯನ್ನು ಭಾರತದ ಕಡೆಗೆ ತಿರುಗಿಸಿದಂತಹ ಮಹಾನ್ ಹೋರಾಟ ಅಪ್ರತಿಮವಾದದ್ದು. ತಮ್ಮಜೀವನವನ್ನು ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರ ವೇದಾಂತ ಸಂದೇಶಗಳನ್ನು ವಿಶ್ವದಲ್ಲೆಡೆ ಪ್ರಸಾರಗೊಳಿಸುವುದಕ್ಕೆ ಮೀಸಲಿಟ್ಟು ಸವೆಸಿದರು. ಭಾರತೀಯ ಹಿಂದೂ ಧರ್ಮದಲ್ಲಿ ತುಂಬಿಕೊಂಡಿದ್ದ ಮೌಢ್ಯತೆ, ಅಂಧಶ್ರದ್ದೆ,ಕಸಕಡ್ಡಿಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸಿ ಎಲ್ಲರೂ ಅದನ್ನು ಪ್ರೀತಿಸುವಂತೆ ಮಾಡಿದರು. ಈ ಕೃತಿಯು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಕಟ್ಟಿಕೊಡುತ್ತದೆ.
ಲೇಖಕ ಡಾ. ಶ್ರೀಶೈಲ ನಾಗರಾಳ ಅವರು ಮೂಲತಃ ಅವಿಭಜಿತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿ ಬಳಿಯ ಇಜೇರಿ ಗ್ರಾಮದವರು. ತಂದೆ- ಯಮನಪ್ಪ. ತಾಯಿ- ಬಸಮ್ಮ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಾಥಮಿಕ ದಿಂದ ಪದವಿವರೆಗೂ ಶಿಕ್ಷಣ ಪೂರೈಸಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವೀಧರರು. ಡಾ ಎಂ ಎಂ ಕಲಬುರಗಿ ಅವರ ವೀರಶೈವ ಸಾಹಿತ್ಯ ಸಂಶೋಧನೆ (2001) ಕುರಿತು ಎಂ.ಫಿಲ್ ನಂತರ 'ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಜೀವನ ಮತ್ತು ಕೃತಿಗಳು' ವಿಷಯವಾಗಿ ಪಿ.ಎಚ್.ಡಿ (2007) ಪದವೀಧರರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಜಿ.ಡಿ.ಎ.ಎಸ್ (ಡಾ. ಅಂಬೇಡ್ಕರ್ ಸ್ಟಡಿ) ಪದವೀಧರರು. ಕನ್ನಡ ಜಾನಪದ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ...
READ MORE