'ಸ್ವಾತಂತ್ರ್ಯದ ಕಿಡಿ ಸಂಗೊಳ್ಳಿ ರಾಯಣ್ಣ' ಆತ್ಮಕಥನವು ಸ್ವಾತಂತ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನನ್ನು ಕುರಿತಾಗಿದ್ದು, ಲೇಖಕ ಚಾಮರಾಜ ಸವಡಿ ಅವರು ರಚಿಸಿದ್ದಾರೆ. ಬದುಕಿರುವಷ್ಟೂ ಕಾಲ ಬರಿಟಿಷರಿಗೆ ತಲ್ಲನವನ್ನುಂಟು ಮಾಡಿದ್ದ ಒಂದಿಡೀ ಪ್ರಾಂತ್ಯದಲ್ಲಿ ತನ್ನ ಚಟುವಟಿಕೆಗಳಿಂದ ಜನರನ್ನು ಪ್ರಭಾವಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕುರಿತಾದ ಕೃತಿಯು ಇದಾಗಿದೆ. ಇತಿಹಾಸದ ಪುಟಗಳಲ್ಲಿ ಸಾಶ್ವತ ಸ್ಥಾನ ಸಂಪಾದಿಸಿದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಬೆಂಗಳೂರಿನಲ್ಲಿ ನಿರ್ಮಾನ ಮಾಡುತ್ತಿರುವ ಸಂದರ್ಭದಲ್ಲಿ ಈ ಕೃತಿಯು ರಚಿತವಾಗಿದೆ. ಕೃತಿಯಲ್ಲಿ ಸಂಗೊಳ್ಳಿ ರಾಯಣ್ಣನ ಸ್ವಾಮಿನಿಷ್ಠೆ, ಸ್ವಾತಂತ್ರ್ಯದೆಡೆಗಿನ ನಿರಂತರ ತುಡಿತ, ತನ್ನ ಪ್ರಾಂತ್ಯದ ಜನರ ಮೇಲಿನ ಪ್ರೀತಿ ಇವೆಲ್ಲವನ್ನೂ ಲೇಖಕರು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.
ಚಾಮರಾಜ ಸವಡಿ ಹುಟ್ಟಿದ್ದು ಬೆಳೆದಿದ್ದು ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ. ಸದ್ಯ ಕೊಪ್ಪಳದಲ್ಲಿ ವಾಸ. ಶಿಕ್ಷಣ: ಬಿಎ, ಬಿ.ಲಿಬ್. ಹಾಗೂ ಎಂ.ಎ. ಇಂಗ್ಲಿಷ್. ವೃತ್ತಿಯಲ್ಲಿ ಪತ್ರಕರ್ತರು. ಭಾರತೀಯ ವಾಯುಪಡೆಯ ಕ್ಷಿಪಣಿ ವಿಭಾಗದಲ್ಲಿ ಏರ್ ಮನ್ ಎಂದು ಕೆಲಸ ಮಾಡಿದ ನಂತರ ಕೆಲ ಕಾಲ ಲೈಬ್ರೇರಿಯನ್ ಆಗಿದ್ದರು. ಹಾಯ್ ಬೆಂಗಳೂರ್, ಓ ಮನಸೇ, ವಿಜಯ ಕರ್ನಾಟಕ, ಈಟಿವಿ ಕನ್ನಡ, ಪ್ರಜಾವಾಣಿ, ಸುವರ್ಣ ನ್ಯೂಸ್, ಸಮಯ ನ್ಯೂಸ್, ನ್ಯೂಸ್ 9, ಸಂಯುಕ್ತ ಕರ್ನಾಟಕ, ಕಸ್ತೂರಿ ನ್ಯೂಸ್, ಕನ್ನಡಪ್ರಭ, ವಿಶ್ವವಾಣಿ ಸಂಸ್ಥೆಗಳಲ್ಲಿ ಸಂಪಾದಕೀಯ ವಿಭಾಗದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೃತಿಗಳು: ರೈತರೇ ಬದುಕಲು ಕಲಿಯಿರಿ (ನೈಸರ್ಗಿಕ ...
READ MORE