ಲೇಖಕಿ ಬಿ.ಎಸ್. ಮಯೂರ ಅವರು ವಿಜ್ಞಾನಿ ಡಾ. ಸ್ಟೀಫನ್ ಹಾಕಿಂಗ್ ಅವರ ಬದುಕು-ಬರಹ-ಚಿಂತನೆಗಳ ಕುರಿತು ಬರೆದ ಕೃತಿ ಇದು. ಗಾಲಿ ಕುರ್ಚಿಯ ಮೇಲೆ ಕುಳಿತೇ ಎಲ್ಲ ಚಟುವಟಿಕೆಗಳನ್ನು ಮಾಡಬೇಕಾದ ಅನಿವಾರ್ಯತೆಯ ಬದುಕನ್ನು ಸವಾಲಾಗಿ ಸ್ವೀಕರಿಸಿ, ಆಕಾಶಕಾಯಗಳ ಬಗ್ಗೆ, ಕಪ್ಪು ರಂದ್ರಗಳ ಬಗ್ಗೆ ಅಧಿಕೃತವಾಗಿ ಉಪನ್ಯಾಸ ನೀಡುವ ವಿಜ್ಞಾನಿ ಇವರು. ಧ್ವನಿಯೂ ತೀರಾ ಆಳದಿಂದ ಬಂದಂತಿದ್ದು, ಯಾರಿಗೂ ಕೇಳಿಸದಷ್ಟು ಸೂಕ್ಷ್ಮವಾಗಿತ್ತು. ಆ ಧ್ವನಿಯ ತರಂಗಗಳನ್ನು ನೂರಾರು ಪಟ್ಟು ದೊಡ್ಡದಾಗಿಸಲು ವ್ಯವಸ್ಥೆ ಮಾಡಿದ ನಂತರವೇ ಅವರ ಉಪನ್ಯಾಸವನ್ನು ಕೇಳಬಹುದಿತ್ತು. ಇಂತಹ ಮನುಷ್ಯನ ಚಿಂತನೆ, ದೂರದೃಷ್ಟಿ, ವೈಜ್ಞಾನಿಕ ಸಾಧನೆಯ ವಿವರಗಳನ್ನು ಒಳಗೊಂಡ ಕೃತಿ ಇದು.
ಬರಹಗಾರ್ತಿ ಮಯೂರ ಬಿ.ಎಸ್ ಅವರು 1936 ಅಕ್ಟೋಬರ್ 05 ಮೈಸೂರಿನಲ್ಲಿ ಜನಿಸಿದರು. ’ಶಬ್ದಶಾಸ್ತ್ರ’ ಎಂಬ ಪಠ್ಯಪುಸ್ತಕ, ’ಸರ್ ಐಸಾಕ್ ನ್ಯೂಟನ್, ಅಲ್ಬರ್ಟ್ ಅಬ್ರಾಹಂ ಮೈಕೆಲ್ಸನ್, ಥಾಮಸ್ ಅಲ್ವ ಎಡಿಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಫಿಗ್ಗೆ ಮೋರ್, ಆಲ್ಫ್ರೆಡ್ ನೊಬೆಲ್ ಪರಸ್ತೃತನ ವ್ಯಕ್ತಿಚಿತ್ರಗಳನ್ನು ರಚಿಸಿದ್ಧಾರೆ. ...
READ MOREಪುಸ್ತಕ ಪರಿಚಯ- ಕೃಪೆ- ಹೊಸತು- ಮಾರ್ಚ್ - 2009
ಸ್ಟೀಫನ್ ಹಾಕಿಂಗ್ ಎ ಬೀಫ್ ಹಿಸ್ಟರಿ ಆಫ್ ಟೈಮ್ ಪುಸ್ತಕದ ಲೇಖಕ, ನಮ್ಮ ಕಾಲದ ಪ್ರತಿಭಾನ್ವಿತ ಖಗೋಳ ವಿಜ್ಞಾನಿ. ಲಾಗೆಂಗ್ನ ವ್ಯಾಧಿಯೆಂದು ಹೆಸರಾದ ಮಾರಣಾಂತಿಕ ರೋಗದಿಂದ ಬಳಲಿದ್ದರೂ, ತಮ್ಮ ಹೆಚ್ಚಿನ ಬದುಕನ್ನು ಅವರಿಗಾಗಿ ನಿರ್ಮಿಸಿದ ಗಾಲಿಕುರ್ಚಿಯಲ್ಲಿ ಕುಳಿತುಕೊಂಡೇ ತಮ್ಮ ಅಮೂಲ್ಯ ಸಂಶೋಧನೆಗಳನ್ನು ನಡೆಸಿ ಜಗದ್ವಿಖ್ಯಾತರಾಗಿ ಅಚ್ಚರಿಮೂಡಿಸಿದ ವಿಜ್ಞಾನಿ ಈತ. ಇಂದಿಗೂ ತಮ್ಮ ಕೈಬೆರಳ ತುದಿಯನ್ನು ಮಾತ್ರ ಉಪಯೋಗಿಸಿ ತಮ್ಮ ಮೆದುಳಲ್ಲಿ ಮೂಡಿದ ಸಂಂವೇದನೆಯನ್ನು ಅಕ್ಷರಗಳಲ್ಲಿ ಕಂಪ್ಯೂಟರ್ ಪರದೆ ಮೂಡಿಸುವಾತ ! ಚೈತನ್ಯಮಯ ವಿಶ್ವದ ಬಗೆಗಿನ ಕಲ್ಪನೆ ಮತ್ತು ಆಕರ್ಷಣೆ ಅವರಿಗೆ ಆಸಕ್ತಿದಾಯಕವಾಗಿತ್ತು. ಇವರ ಬದುಕು ಮತ್ತು ಬೌದ್ಧಿಕ ವಿಚಾರಗಳನ್ನೊಳಗೊಂಡ ಅಪರೂಪದ ಪುಸ್ತಕವಿದು. ಅಪೂರ್ವ ಛಾಯಾಚಿತ್ರಗಳಿವೆ.