ಲೇಖಕ ಎಸ್. ಶಂಕರಪ್ಪ ತೋರಣಗಲ್ಲು ಅವರ ಕೃತಿ-ಸರ್ ಎಂ ವಿ. ಸರ್ ಎಂ ವಿಯವರ ಜೀವನ ಮತ್ತು ಲೇಖನಗಳು ಚಿತ್ರಿಸುತ್ತದೆ. ಆದರೆ, ಈ ಕೃತಿಯಲ್ಲಿ ಸರ್. ಎಂ.ವಿ ಅವರ ಭಿನ್ನ ಚಿತ್ರಣ ದೊರಕುತ್ತದೆ. ಸರ್ ಎಂ ವಿ ಅವರ ಇಂಜಿನಿಯರಿಂಗ್ ಸಾಧನೆಗಳನ್ನು ತಾಂತ್ರಿಕ ವಿಮರ್ಶೆಗೆ ಒಳಪಡಿಸಿದ್ದಾರೆ. ವಸ್ತುನಿಷ್ಠತೆಗೆ ಮಾತ್ರ ಸರ್.ಎಂ.ವಿ. ಅವರ ಬದುಕಿನಲ್ಲಿ ಜಾಗವಿದೆ. ಎಂ ವಿ ಅವರು ಮಹಾ ಮೇಧಾವಿ, ಅನನ್ಯ ಇಂಜಿನಿಯರ್. ಭಾವುಕತೆಯ ನೆಲೆಯಲ್ಲಿ ಸರ್.ಎಂ.ವಿ. ಅವರ ವ್ಯಕ್ತಿತ್ವವನ್ನು ಕಟ್ಟಿಕೊಡದೇ ತಾಂತ್ರಿಕ ಸಂಗತಿಗಳನ್ನು ಅವಲಂಬಿಸಿದ ಕೃತಿ ಇದು.
ಲೇಖಕ ಎನ್ ಶಂಕರಪ್ಪ ತೋರಣಗಲ್ಲು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದವರು. ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ವೃತ್ತಿಯಲ್ಲಿ ಸಮಾಲೋಚಕ ಇಂಜಿನಿಯರ್ ಆಗಿದ್ದಾರೆ. ಕೃತಿಗಳು: ಸ್ವಾಮಿ ವಿವೇಕಾನಂದ ; ಕಪ್ಪು ಬಿಳುಪು (ಜನಪ್ರಿಯ ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ಅಜ್ಞಾತ ಸ್ವಾಮಿ ವಿವೇಕಾನಂದರನ್ನು ಬೇರ್ಪಡಿಸಿ ನೋಡಿದ್ದಾರೆ), ವಿಜ್ಞಾನ- ಏನು? ಹೇಗೆ? , ಸಂಗಂ - ತಮಿಳಗಂ, ಲಿಪಿ ನಿಗೂಢ, ಭಗವದ್ಗೀತೆ ಬೆಳಕು ನೀಡುವುದೇ?, ವಾಸ್ತು ಎಂಬ ವ್ಯಾಧಿ, ತಂತ್ರಜ್ಞಾನದ ದೇಸೀಕರಣ- ಕನ್ನಡದ ಜಾಗತೀಕರಣ, ಹಳಗನ್ನಡ- ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನ .ಆರ್ಯರು ಯಾರು ? ...
READ MORE