ಶ್ರೀವಿದ್ಯಾರಣ್ಯ ಸ್ವಾಮಿಗಳ ಕುರಿತು ಸಂಪೂರ್ಣ ಮಾಹಿತಿ ನೀಡುವ ಕೃತಿ ಇದು. ಉಪೋದ್ಘಾತ, ಕುಲವೃತ್ತಾಂತವೂ ಜ್ಞಾನೇಶ್ವರ ಸಾಮ್ಯವೂ, ಜನ್ಮವೂ ವಯೋಮಾನವೂ, ಅಧ್ಯಯನವೂ ಗುರುಗಳೂ, ರಾಜ್ಯಸ್ಥಾಪನೆಯು, ರಾಜ್ಯವೃತ್ತವು, ಧಾರ್ಮಿಕ ವಿಚಾರಗಳು, ವಿದ್ಯಾರಣ್ಯರ ಕಾಲದಲ್ಲಿ ಪಾಶ್ಚಾತ್ಯರ ಸ್ಥಿತಿ, ವಿದ್ಯಾರಣ್ಯರೂ, ವೇದಾಂತ ದೇಶೀಕರು, ವಿಜಯನಗರದ ರಾಜ್ಯವಿಸ್ತರಣ, ಬುಕ್ಕರಾಯನು, ಮಾಧವ ಮಂತ್ರಿಯು, ವಿಜಯನಗರದ ಅರಸರ ಮತ್ತು ವಿದ್ಯಾರಣ್ಯರ ಕಾಲದಲ್ಲಿ ವಾಙ್ಮಯೋತ್ಕರ್ಷ ಮುಂತಾದ ಮಾಹಿತಿ ಈ ಕೃತಿಯಲ್ಲಿದೆ.
ಧಾರವಾಡದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪಂಡಿತ ಭೀಮಾಜಿ ಜೀವಾಜಿ ಹುಲಿಕವಿಯವರು ಕನ್ನಡ ಮತ್ತು ಕಂನಾಡಿನ ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದವರು. ‘ಶ್ರೀಕರ್ನಾಟಕಸಿಂಹಾಸನ ಪ್ರತಿಷ್ಠಾಪನಾಚಾರ್ಯ ಬಿರುದಾಂಕಿತ ಶ್ರೀ ವಿದ್ಯಾರಣ್ಯಸ್ವಾಮಿಗಳು’ ಕೃತಿಯನ್ನು ಇವರು ರಚಿಸಿದ್ದಾರೆ. ...
READ MORE