ಉತ್ತರ ಭಾರತದ ವರ್ಧನ ಮನೆತನದ ಅರಸು ಪ್ರಭಾಕರವರ್ಧನ ಹಾಗೂ ಯರೋವತಿಯ ಪುತ್ರ ಶ್ರೀ ಹರ್ಷನ ಹುಟ್ಟು, ಬೆಳವಣಿಗೆ,ರಾಜ್ಯಭಾರ, ಮಹಾರಾಜಾಧಿರಾಜ ಶ್ರೀ ಹರ್ಷನಾದ ಬಗೆ, ಹರ್ಷವರ್ಧನನ ದಿಗ್ವಿಜಯಗಳು, ಶ್ರೀ ಹರ್ಷನೂ ಮತ್ತು ಚೀನಾದ ಹುಯೇತ್ಸಾಂಗನೂ ಹಾಗೂ ಭಾಸ್ಕರ ವರ್ಮನೂ ಮತ್ತು ಹರ್ಷನ ಕಾಲದ ಹಿಂದೂ ದೇಶ-ಕೈಗಾರಿಕೆ, ಧಾರ್ಮಿಕ, ಸಾಮಾಜಿಕ ಜನಜೀವನ ಹೀಗೆ ವಿಸ್ತೃತವಾದ ವಿವರಗಳುಳ್ಳ ಕೃತಿ.
ಲೇಖಕ ಜೆ.ಪಿ. ರಾಜರತ್ನಂ ಅವರು ಈ ಹಿಂದೆ ಚೀನಾದೇಶದ ಬೌದ್ಧ ಯಾತ್ರಿಕರು, ಗೌತಮ ಬುದ್ಧ, ಅಶೋಕ ಮೌರ್ಯ ಹೀಗೆ ಕೃತಿಗಳನ್ನು ಬರೆದು ಇವರ ರಾಜ್ಯಭಾರ ಹಾಗೂ ಧಾರ್ಮಿಕ ಪ್ರಸಾರ ಕುರಿತು ವಿವರಿಸಿದ್ದರು. ಇದೀಗ ಶ್ರೀ ಹರ್ಷ ಶೀರ್ಷಿಕೆಯಡಿ ಈ ಕೃತಿ ಬರೆದಿದ್ದಾರೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE