ಜೈನ ದಿಗಂಬರ ಪರಂಪರೆಯಲ್ಲಿ ಆಚಾರ್ಯ ಶ್ರೀ ಕುಂದಕುಂದರದು ದೊಡ್ಡ ಹೆಸರು. ಇವರ ಸಮಯಸಾರ ಗ್ರಂಥ ರಾಜನಿಗೆ ಅಖಿಲ ಭಾರತೀಯಾಧ್ಯಾತ್ಮ ಇತಿಹಾಸದಲ್ಲಿಯೇ ವಿಶಿಷ್ಟ ಸ್ಥಾನವಿದೆ. ಇದರಲ್ಲಿ ವ್ಯವಹಾರ ನಯ ಮತ್ತು ನಿಶ್ಚಯದಿಂದ ಆತ್ಮನ ಸ್ವರೂಪವನ್ನು ವಿಸ್ವಾರವಾಗಿ ವಿವೇಚಿಸಿದ್ದಾರೆ. ಪ್ರಸ್ತುತ ಕೃತಿಯು ಕುಂದ ಕುಂದಾಚಾರ್ಯರ ಕುರಿತು ಸಂಪೂರ್ಣ ಮಾಹಿತಿ ನೀಡುತ್ತದೆ.
ಮಹಿಳಾ ಅಧ್ಯಯನದ ಬಗ್ಗೆ ವಿಶೇಷ ಅಸ್ಥೆಯುಳ್ಳ ಪ್ರೀತಿ ಶುಭಚಂದ್ರ ಅವರು 1957 ಸೆಪ್ಟಂಬರ್ 01 ರಂದು ಜನಿಸಿದರು. ’ಇಪ್ಪತ್ತನೇ ಶತಮಾನದ ವಚನ ಸಾಹಿತ್ಯ’ ಒಂದು ಅಧ್ಯಯನಕ್ಕೆ ಪಿ.ಎಚ್.ಡಿ ದೊರೆತಿದ್ಧು ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು. ’ಸೃಜನೆಯ ಮೂಡು’ ಮಹಿಳಾ ಕೇಂದ್ರಿತ ಲೇಖನಗಳ ಸಂಕಲನ). ’ಕನ್ನಡ ಕೈದೀವಿಗ” ಪುಸ್ತಕಗಳ ವಿಮರ್ಶಾ ಪುಸ್ಕವನ್ನು ಪ್ರಕಟಿಸಿದ್ದಾರೆ. ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ಕಾವ್ಯನಂದ ಪುರಸ್ಕಾರ (ಪಿಎಚ್.ಡಿ. ಕೃತಿಗೆ), ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರಳ್ಳಿ ದತ್ತಿ ಬಹುಮಾನ, ದಕ್ಷಿಣಭಾರತ ಜೈನ ಮಹಾ ...
READ MORE