ಪಾ.ವೆಂ. ಆಚಾರ್ಯ ಹಾಗೂ ವೀ. ಸೀತಾರಾಮಯ್ಯನವರು ಜೊತೆಯಾಗಿ ಶಿವರಾಮ ಕಾರಂತ ಅವರ ಬದುಕು-ಬರೆಹ ಕುರಿತು ಬರೆದ ಕೃತಿ-ಶಿವರಾಮ ಕಾರಂತ. ಈ ಕೃತಿ ಮೊದಲು 1956ರಲ್ಲಿ ನವೋದಯ ಪುಸ್ಪ್ರತಕ ಮಾಲೆಯಡಿ ಪ್ರಕಟ ಗೊಂಡಿತ್ತು. ನಂತರ, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಈ ಪುಸ್ತಕವನ್ನು (1993) ಪ್ರಕಟಿಸಿದೆ.
ಕೇವಲ ಉಸಿರಾಡಿಕೊಂಡಿರುವುದು ಬದುಕಿನ ಧರ್ಮವೂ ಅಲ್ಲ; ಜನಾಂಗಕ್ಕೆ ಭೂಷಣವೂ ಅಲ್ಲ. ಬರೀ ಬದುಕಿದರೆ ಸಾಲದು. ಕಾರಂತರಂತೆ ಚೆನ್ನಾಗಿ-ಅರ್ಥಪೂರ್ಣವಾಗಿ ಬದುಕಬೇಕು ಎಂಬ ಸಂದೇಶ ನೀಡುವತ್ತ ಈ ಕೃತಿ ರಚಿತವಾಗಿದೆ. ಶಿವರಾಮ ಕಾರಂತರ ವ್ಯಕ್ತಿಗತ ಬದುಕು, ಸಾಹಿತ್ಯಕ ಸಾಧನೆ, ವೈಚಾರಿಕ ಪರಿಗಳು-ಸಂದೇಶಗಳು ಎಲ್ಲವೂ ಒಳಗೊಂಡ ಕೃತಿಯು ಓದುಗನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್' ಸೇರಿದರು. ...
READ MORE