ಶಿಕ್ಷಣ ಮತ್ತು ಜೀವನ

Author : ಎಚ್.ಎಸ್. ರಾಘವೇಂದ್ರರಾವ್

Pages 116

₹ 85.00




Year of Publication: 2015
Published by: ವಸಂತ ಪ್ರಕಾಶನ
Address: #360, 10ನೇ ’ಬಿ’ ಮೈನ್ ರೋಡ್, 3ನೇ ಬ್ಲಾಕ್, ಜಯನಗರ, ಬೆಂಗಳೂರು- 560011
Phone: 09482541389

Synopsys

‘ಶಿಕ್ಷಣ ಮತ್ತು ಜೀವನ’ ಕೃತಿಯು ಜೆ. ಕೃಷ್ಣಮೂರ್ತಿ ಅವರ ಜೀವನ ಕುರಿತ ಕೃತಿಯಾಗಿದೆ. ಈ ಕೃತಿಯು ಎಚ್.ಎಸ್.ರಾಘವೇಂದ್ರ ರಾವ್ ಅವರ ಅನುವಾದಿತ ಕೃತಿಯಾಗಿದೆ. ಶಿಕ್ಷಣ ಮತ್ತು ಜೀವನ ವ್ಯಾಖ್ಯಾನ, ಸರಿಯಾದ ಶಿಕ್ಷಣ, ಬುದ್ಧಿಶಕ್ತಿ, ಅಧಿಕಾರ ಮತ್ತು ಬೌದ್ಧಿಕತೆ, ಶಿಕ್ಷಣ ಮತ್ತು ವಿಶ್ವಶಾಂತಿ, ಶಾಲೆ, ಪೋಷಕರು ಮತ್ತು ಶಿಕ್ಷಕರು, ಲೈಂಗಿಕತೆ ಮತ್ತು ಮದುವೆ, ಕಲೆ, ಸೌಂದರ್ಯ ಮತ್ತು ಸೃಜನ ಹೀಗೆ ಎಲ್ಲಾ ವಿಚಾರಗಳು ಇಲ್ಲಿ ಅಡಕವಾಗಿವೆ. ಕೃಷ್ಣಮೂರ್ತಿಯವರು ಶಿಕ್ಷಣ ಮೊದಲ ಆದ್ಯತೆಯನ್ನು ಕೊಡುತ್ತಿದ್ದರು ಹಾಗೂ ಶಿಕ್ಷಣವನ್ನು ಬಹಳಷ್ಟು ಪ್ರೀತಿಸುತ್ತಿದ್ದರು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಬದಲಾವಣೆಯ ಮಾರ್ಗವನ್ನು ಬಹುವಾಗಿ ನಂಬಿದ್ದ ಅವರ ಕೆಲವೊಂದು ವಿಚಾರಗಳನ್ನು ನಾವು ಇಲ್ಲಿ ಕಾಣಬಹುದು.

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books