ಸತ್ಯ ಪಥದ ನಿತ್ಯ ಸಂತ

Author : ಸುಮಾ ಚಂದ್ರಶೇಖರ್

Pages 64

₹ 40.00




Year of Publication: 2019
Published by: ಸುಮಾ ಚಂದ್ರಶೇಖರ ಪ್ರಕಾಶನ
Address: ಬೆಂಗಳೂರು

Synopsys

ಲೇಖಕಿ ಸುಮಾ ಚಂದ್ರಶೇಖರ ಅವರು ಬರೆದ ಕೃತಿ-ಸತ್ಯ ಪಥದ ನಿತ್ಯ ಸಂತ. ಮಹಾತ್ಮ ಗಾಂಧೀಜಿ ಅವರು ಜನಿಸಿ 150 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಗಾಂಧೀಜಿ ನಡೆ-ನುಡಿ-ವಿಚಾರ-ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಲೇಖಕಿಯ ಪ್ರಯತ್ನ ಇಲ್ಲಿದೆ. ಒಟ್ಟು 18 ಅಧ್ಯಾಯಗಳಿದ್ದು, ಗಾಂಧೀಜಿ ಕಾಲ ಸದಾ ಸಾರ್ವಕಾಲಿಕ ಎಂದು ಪ್ರತಿಪಾದಿಸುವ ಲೇಖಕಿ ದುಡಿಮೆ ಯಾವುದೇ ಇರಲಿ; ಪ್ರಾಮಾಣಿಕವಾಗಿ ಮಾಡುವ ಎಲ್ಲ ಕೆಲಸಗಳು ಮಹಾತ್ಮ ಗಾಂಧೀಜಿಯ ವಿಚಾರಧಾರೆಯನ್ನು ಅನುಸರಿಸುವವರೇ ಆಗಿರುತ್ತಾರೆ ಎಂಬುದು ಅವರ ಮತ್ತೊಂದು ಸಮರ್ಥನೆ.

ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ಕೃತಿಗೆ ಬೆನ್ನುಡಿ ಬರೆದು ‘ಮಹಾತ್ಮಾ ಗಾಂಧೀಜಿ ಅವರನ್ನು ಸಾಮಾನ್ಯ ವ್ಯಕ್ತಿ ಎಂದೇ ನೋಡಿ ಆ ವ್ಯಕ್ತಿಯ ಪರಿಚಯಕ್ಕೆ ಇಳಿದರೆ ಅವರ ಅಸಾಮಾನ್ಯ ಗಟ್ಟಿ ಹೆಜ್ಜೆಗಳು ನಮ್ಮನ್ನು ಎಚ್ಚರಿಸುತ್ತವೆ. ಗೋಡೆಯ ಮೇಲೆ ಚಿತ್ರವಾಗಿ ಉಳಿದಿರುವ ಗಾಂಧೀಜಿ ಅವರನ್ನು ಮನೆ-ಮನಗಳಿಗೆ ಕರೆ ತರುವ ಕೆಲಸ ತುರ್ತಾಗಿ ಆಗಬೇಕಿದೆ. ಬಾಪೂ ಚಿಂತನೆಗಳಿಗೆ ನಿಜವಾದ ಹೊಳಪು ಸಿಗುತ್ತದೆ. ಈ ಕಾರಣಕ್ಕೆ ಗಾಂಧಿ ಕುರಿತ ಮರು ಓದಿನ ಅಗತ್ಯವಿದೆ. ಸತ್ಯ, ಅಹಿಂಸೆ, ಆದರ್ಶ, ಪ್ರಾಮಾಣಿಕ ಹೀಗೆ ಸ್ವಾವಲಂಬನೆಯಿಂದ ಗಾಂಧೀಜಿ ಇಂದಿಗೂ ಪ್ರಸ್ತುತ ಎಂದು ಲೇಖಕಿ ಸುಮಾ ಚಂದ್ರಶೇಖರ ಅವರು ಈ ಹೊತ್ತಿಗೆಯಲ್ಲಿ ತಿಳಿಸಿಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಸುಮಾ ಚಂದ್ರಶೇಖರ್
(30 May 1988)

ಲೇಖಕಿ ಸುಮಾ ಚಂದ್ರಶೇಖರ್‌ ಅವರು (ಜನನ: 1988 ಮೇ 30)  ಬೆಂಗಳೂರಿನವರು.  ತಂದೆ - ರಮೇಶ ಸಿ. ಜಿ. ಸಮೂಹ ಸಂವಹನ & ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಅಮರ ಬಾಪು ಚಿಂತನ ಪತ್ರಿಕೆಯಲ್ಲಿ ಉಪ ಸಂಪಾದಕರು. ‘ಸತ್ಯ ಪಥದ ನಿತ್ಯ ಸಂತ’ (ಗಾಂಧಿ ವ್ಯಕ್ತಿತ್ವ ದರ್ಶನ) ಅವರ ಕೃತಿ. ಕನ್ನಡ ಸಾಹಿತ್ಯ ಪರಿಷತ್ತಿನಿಂದ 2019ನೇ ಸಾಲಿನ ರಾಜ್ಯ ಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಲ್ಲಿ ಒಂದಾದ ಲಿಂ.ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿಗೆ ಈ ಕೃತಿ ಭಾಜನವಾಗಿದೆ. ಅವರಿಗೆ ಬಾ-ಬಾಪು 150ನೇ ವರ್ಷಾಚರಣೆಯ ಪ್ರಯುಕ್ತ ಬೆಂಗಳೂರಿನ ಅಖಿಲ ಕರ್ನಾಟಕ ಸತ್ಸಂಗ ...

READ MORE

Related Books